ದೇಶ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿ ಖಡಕ್ ಸೂಚನೆ – Vishwanews24
ದೇಶ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿ ಖಡಕ್ ಸೂಚನೆ – Vishwanews24
ಕೇವಡಿಯಾ (ಗುಜರಾತ್): ಭಾರತಕ್ಕೆ ದ್ರೋಹ ಎಸಗುವವರಿಗೆ ವಿಶ್ವದ ಯಾವುದೇ ಜಾಗದಲ್ಲೂ ಸುರಕ್ಷಿತ ತಾಣ ಇಲ್ಲದಿರುವಂತೆ ಖಾತರಿಪಡಿಸಿಕೊಳ್ಳಬೇಕು ಎಂದು ಸಿಬಿಐ, ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ನೀಡಿದ್ದಾರೆ.
ಗುಜರಾತ್ನ ಕೇವಡಿಯಾದಲ್ಲಿ ನಡೆದ ಸಿಬಿಐ ಮತ್ತು ಸಿವಿಸಿ ಜಂಟಿ ಸಮಾವೇಶ ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಅವರು, ‘ಎಷ್ಟೇ ಬಲಶಾಲಿಯಾಗಿದ್ದರೂ ದೇಶದ ಹಾಗೂ ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
ದೇಶದ ಬ್ಯಾಂಕ್ಗಳಿಗೆ ಸಾಲ ಮರುಪಾವತಿ ಮಾಡದೆ ವಿದೇಶಗಳಲ್ಲಿ ಆಶ್ರಯ ಪಡೆದಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ವಿರುದ್ಧ ಸರ್ಕಾರವು ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದಾರೆ.
‘ನೀವು ಈ ಮಣ್ಣು ಹಾಗೂ ತಾಯಿ ಭಾರತಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂಬುದು ನೆನಪಿರಲಿ. ನಮ್ಮ ದೇಶದ ವಿರುದ್ಧ ಕಾರ್ಯಾಚರಿಸುವವರಿಗೆ ವಿಶ್ವದ ಯಾವುದೇ ಮೂಲೆಯಲ್ಲಿಯೂ ಸುರಕ್ಷಿತ ನೆಲೆ ಇರದಂತೆ ನೋಡಿಕೊಳ್ಳಬೇಕಿದೆ. ದೇಶದ ಹಿತಾಸಕ್ತಿಗಾಗಿ ನಾವು ಕೆಲಸ ಮಾಡೋಣ’ ಎಂದು ಮೋದಿ ಹೇಳಿದ್ದಾರೆ.
ಮಂಗಳೂರು: ಡಿಸಿಪಿ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ : ಇಬ್ಬರ ಬಂಧನ – Vishwanews24
