ದೋಸ್ತಿ ಸರ್ಕಾರದ ಉಳಿಸಲು ಎಂತಹ ತ್ಯಾಗಕ್ಕೂ ನಾವು ಸಿದ್ದ : ಜಿ.ಟಿ. ದೇವೇಗೌಡ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಮೈತ್ರಿ ಸರ್ಕಾರ ಪತನವಾಗಲ್ಲ. ದೋಸ್ತಿ ಸರ್ಕಾರದ ಉಳಿಸಲು ಎಂತಹ ತ್ಯಾಗಕ್ಕೂ ನಾವು ಸಿದ್ದರಿದ್ದೇವೆ.ನಾವೆಲ್ಲಾ ಒಟ್ಟಿಗಿದ್ದೇವೆ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ. ದೇವೇಗೌಡ, ಸರ್ಕಾರದ ಉಳಿವಿಗಾಗಿ ನಾಯಕತ್ವ ಬದಲಾವಣೆಗೂ ವರಿಷ್ಠರು ಸಿದ್ದವಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಥವಾ ಕುಮಾರಸ್ವಾಮಿ ಯಾರೇ ಮುಂದುವರೆಯಲಿ, ಇದಕ್ಕೆ ನಾವು ಮುಕ್ತರಾಗಿದ್ದೇವೆ ಎಂದು ಹೇಳಿದರು.

ಬಿಜೆಪಿಯವರು ನಮ್ಮ ಪಕ್ಷದ ಶಾಸಕರನ್ನು ಹೈಜಾಕ್ ಮಾಡುವ ಪ್ರಯತ್ನದಲ್ಲಿದ್ದಾರೆ. ಇದರಿಂದ ಮೈತ್ರಿ ನಾಯಕರು ಆತಂಕಗೊಂಡಿದ್ದಾರೆ. ಹಾಗಾಗಿ ಎಲ್ಲಾ ಶಾಸಕರನ್ನು ಒಂದು ಕಡೆ ಸೇರಿಸುವ ಚಿಂತನೆ ನಡೆಸಲಾಗಿದೆ ಎಂದರು.