ಉಡುಪಿ

ದ.ಕ, ಉಡುಪಿ ಜಿಲ್ಲೆಗಳಲ್ಲಿ ಅಬ್ಬರದ ಮಳೆ ಎಚ್ಚರಿಕೆ..

ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಕಡೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದ್ದು, ‘ಸಾಗರ್’ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಳ್ಳುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವದಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಬಿರುಸಾದ ಗಾಳಿ ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮೀನುಗಾರರಿಗೆ ಸೂಚನೆ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಮಾರ್ಪಟ್ಟಿದೆ. ‘ಸಾಗರ್’ ಚಂಡಮಾರುತವು ಕೊಲ್ಲಿ ರಾಷ್ಟ್ರಗಳತ್ತ ಚಲಿಸಲಿದೆ. ಚಂಡ ಮಾರುತದ ಪರಿಣಾಮ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆಗಳಿವೆ. ಈ ನಡುವೆ ಅರಬ್ಬಿ ಸಮುದ್ರದಲ್ಲಿ ಮತ್ತೊಂದು ವಾಯಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಎರಡು ದಿನಗಳಲ್ಲಿ ಸರಿಯಾದ ಚಿತ್ರಣ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆ ಅವಧಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚನೆ ನೀಡಿದೆ.

ಮುನ್ನೆಚ್ಚರಿಕೆ ಕ್ರಮ ಸೂಚನೆ: ರಾಜ್ಯದಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಬಹುದು, ಆದರೆ ಚಂಡಮಾರುತದ ಭೀತಿ ಇಲ್ಲ ಎಂದು ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಕರ್ನಾಟಕ ಕರಾವಳಿಯಿಂದ ಸುಮಾರು 400 ಕಿಮೀ. ದೂರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಚಂಡಮಾರುತದಿಂದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಕರಾವಳಿಗೆ ಯಾವುದೇ ಸಮಸ್ಯೆ ಇಲ್ಲ. ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ದ್ವೀಪಸಮೂಹಗಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕುರಿತು ಇಲಾಖೆ ಎಚ್ಚರಿಕೆ ನೀಡಿದೆ. ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಡಬೇಕು ಹಾಗೂ ಸಕಾಲದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

29ರಂದು ಮುಂಗಾರು ಪ್ರವೇಶಸಾಮಾನ್ಯ ಅವಧಿಗಿಂತ ಈ ಬಾರಿ ಮೂರು ದಿನ ಮೊದಲೇ ಕೇರಳ ಕರಾವಳಿ ಮೂಲಕ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ  ತಿಳಿಸಿದೆ. ಮೇ 20ರ ಆಸುಪಾಸು ಅಂಡಮಾನ್ ಹಾಗೂ ಮೇ 23ರ ಆಸುಪಾಸು ಬಂಗಾಳ ಕೊಲ್ಲಿ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಈ ಬಾರಿ ಕೃಷಿ ಚಟುವಟಿಕೆಗೆ ಪೂರಕವಾಗಿ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

 

Vishwa News 24

Recent Posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಿಲ್ಲ : ಶೋಭಾ ಕರಂದ್ಲಾಜೆ – vishwanews24

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು: ಸಿದ್ದರಾಮಯ್ಯ  ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ…

5 hours ago

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ – vishwanews24

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…

5 hours ago

ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ವಿಶೇಷ ಲಕ್ಷಪುಷ್ಪಾರ್ಚನೆ – vishwanews24

ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…

5 hours ago

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ – vishwanews24

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…

7 hours ago

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…

7 hours ago

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…

8 hours ago