Featured

ದ.ಕ.ದಲ್ಲಿ ಮರಳುಗಾರಿಕೆ ನಿಷೇಧ : ಡಿಸಿ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌ – Vishwanews24

ದ.ಕ.ದಲ್ಲಿ ಮರಳುಗಾರಿಕೆ ನಿಷೇಧ : ಡಿಸಿ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್‌

ಮಂಗಳೂರು:ಉಡುಪಿ ಜಿಲ್ಲೆಯ ಸಿಆರ್‌ಝೆಡ್‌ (ಕರಾವಳಿ ನಿಯಂತ್ರಣ ವಲಯ) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಹಸಿರು ಪೀಠ (ಎನ್‌ಜಿಟಿ) ಆದೇಶವಿದೆ. ಇದೇ ಆಧಾರ ಮೇಲೆ ದ.ಕ. ಜಿಲ್ಲೆಯಲ್ಲೂ ಸಿಆರ್‌ಝೆಡ್‌ನಲ್ಲೂ ಮರಳುಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದೀಗ ತಡೆ ನೀಡುವಂತೆ ಮರಳುಗಾರರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಹೈಕೋರ್ಟ್‌ ಜಿಲ್ಲಾಧಿಕಾರಿ ಆದೇಶಕ್ಕೆ ಮಂಗಳವಾರ ತಡೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಷೇಧ ಮಾಡುವಂತೆ ಮೇ 22ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ನದಿ ತಟದಲ್ಲಿರುವ ದೋಣಿ, ಮರಳು ಸಾಗಾಣಿಕೆಗೆ ಬಳಸುವ ವಾಹನಗಳನ್ನು ತೆರವುಗೊಳಿಸುವಂತೆ ಆದೇಶಿಸಲಾಗಿತ್ತು. ಅದೀಗ ಅಸಿಂಧುಗೊಂಡಿದೆ.

ಸುಪ್ರೀಂಕೋರ್ಟ್‌ಗೆ ಮೊರೆ: ಸಿಆರ್‌ಝೆಡ್‌ ಮರಳುಗಾರಿಕೆಗೆ ನಿಷೇಧಿಸಿ ಸುಪ್ರೀಂ ಕೋರ್ಟ್‌ ರಾಷ್ಟ್ರೀಯ ಹಸಿರು ಪೀಠ ಆದೇಶದ ವಿರುದ್ಧ ಸಾಂಪ್ರದಾಯಿಕ ಮರಳುಗಾರರು ಸುಪ್ರೀಂಕೋರ್ಟ್‌ಗೆ ದಾವೆ ಸಲ್ಲಿಸಿದ್ದಾರೆ. ಮರಳುಗಾರರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲ ದೇವದತ್‌ ಕಾಮತ್‌ ವಾದಿಸಲಿದ್ದಾರೆ.

ಆನ್‍ಲೈನ್‍ ಲೋನ್ ಆ್ಯಪ್ ಮೂಲಕ ಸಾಲ ನೀಡಿದವರ ಕಿರುಕುಳ : ದಂಪತಿ ಆತ್ಮಹತ್ಯೆ – Vishwanews24

ಮರಳುಗಾರರ ವಾದವೇನು?: ಕರಾವಳಿ ಜಿಲ್ಲೆಯಲ್ಲಿ ಸುಮಾರು 5 ದಶಕಗಳಿಂದ ಮರಳುಗಾರಿಕೆ ನಡೆಸಲಾಗುತ್ತಿದ್ದು, ಇದನ್ನೇ ನಂಬಿಕೊಂಡು ಸಹಸ್ರಾರು ಮಂದಿ ಬದುಕುತ್ತಿದ್ದಾರೆ. ಸಿಆರ್‌ಝೆಡ್‌ ಮರಳುಗಾರಿಕೆ ನಡೆಸದಿದ್ದಲ್ಲಿ ಅಳಿವೆಬಾಗಿಲು ಸುತ್ತಮತ್ತ ಮರಳು ರಾಶಿ ಬಿದ್ದು ಮೀನುಗಾರಿಕೆಗೆ ತೊಂದರೆಯಾಗಲಿದೆ. ನದಿಯಲ್ಲಿ ಮರಳು ತುಂಬಿ ನಗರ ಭಾಗದಲ್ಲಿ ಕೃತಕ ನೆರೆ ಮತ್ತಷ್ಟು ಹೆಚ್ಚಳವಾಗಲಿದೆ. ಅಕ್ರಮ ಮರಳುಗಾರಿಕೆ ನಿಯಂತ್ರಣವಾಗಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ಸಿಗಬೇಕಾದರೆ ಮರಳುಗಾರಿಕೆ ಅನುಮತಿ ನೀಡಬೇಕಾಗಿದೆ.

ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ನಿಷೇಧಿಸಿ ಎನ್‌ಜಿಟಿ ಆದೇಶ ಮಾಡಿದ್ದು, ಅದು ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಅನ್ವಯವಾಗುವುದಿಲ್ಲ. ಅಕ್ರಮ ಮರಳುಗಾರಿಕೆಯನ್ನು ತಡೆಯಲಿ, ಆದೇಶ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವವರಿಗೆ ನ್ಯಾಯಾಲಯ ಅವಕಾಶ ಮಾಡಿಕೊಂಡಬೇಕೆಂದು ಸುಪ್ರೀಂ ಕೋರ್ಟ್‌ ಮುಂದೆ ಅಹವಾಲು ಇರಿಸಲಾಗುವುದು ಎಂದು ಮರಳು ಕ್ರಿಯಾ ಸಮಿತಿ ಮಾಜಿ ಅಧ್ಯಕ್ಷ ಮಯೂರ್‌ ಉಲ್ಲಾಳ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಹಸಿರು ಪೀಠ ಆದೇಶವಿದ್ದು, ಇದು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ಅನ್ವಯವಾಗುವುದಿಲ್ಲ ಎಂಬುದನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ ದ.ಕ. ಮರಳು ಕ್ರಿಯಾ ಸಮಿತಿ ಮಾಜಿ ಅಧ್ಯಕ್ಷ ಮಯೂರ್‌ ಉಳ್ಳಾಲ್‌ ಹೇಳಿದ್ದಾರೆ.

ಮಂಗಳೂರು ಪಾಲಿಕೆ :ನೂತನ ಮೇಯರ್ ಜಯಾನಂದ , ಉಪ ಮೇಯರ್ ಪೂರ್ಣಿಮಾ ಆಯ್ಕೆ – Vishwanews24

Vishwa News 24

Recent Posts

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ : ಮಂಗಳೂರಿನಲ್ಲಿ ಸಂಭ್ರಮಾಚರಣೆ -vishwanews24

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ : ಮಂಗಳೂರಿನಲ್ಲಿ ಸಂಭ್ರಮಾಚರಣೆ ಮಂಗಳೂರು: ತುಳು ಭಾಷೆಗೆ ಕರ್ನಾಟಕದ ಎರಡನೇ…

3 hours ago

ಎಲ್ಲ ಔಷಧಿ ಅಂಗಡಿಗಳಲ್ಲಿ ಸಿಸಿಟಿವಿ ಕಡ್ಡಾಯ: ಕೇಂದ್ರ ಸರಕಾರ ಪ್ರಸ್ತಾವ – vishwanews24

ಪ್ರಿಸ್ಕ್ರಿಪ್ಷನ್ ಆಧಾರದಲ್ಲಿ ಮಾರಾಟವಾಗುವ ಔಷಧಗಳ ವಿತರಣೆಗೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಿಸಿಟಿವಿ ಕಡ್ಡಾಯ : ಕೇಂದ್ರದ ಹೊಸ ಪ್ರಸ್ತಾವನೆ ನವದೆಹಲಿ: ಪ್ರಿಸ್ಕ್ರಿಪ್ಷನ್…

3 hours ago

ದಶಕಗಳ ಹೋರಾಟಕ್ಕೆ ಐತಿಹಾಸಿಕ ಜಯ – ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ : ಸಿಎಂ ಮಹತ್ವದ ಘೋಷಣೆ – vishwanews24

ದಶಕಗಳ ಹೋರಾಟಕ್ಕೆ ಐತಿಹಾಸಿಕ ಜಯ .. ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆ ಮಾನ್ಯತೆ  ಮಂಗಳೂರಿನಲ್ಲಿ ಸಂಪುಟ ಸಭೆಯಲ್ಲಿ …

3 hours ago

ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿರುತ್ತದೆ: ಕೆ.ಎನ್ ರಾಜಣ್ಣ – vishwanews24

ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿರುತ್ತದೆ: ಕೆ.ಎನ್ ರಾಜಣ್ಣ ತುಮಕೂರು: “ಸಿದ್ದರಾಮಯ್ಯ ಅವರು ಶಕ್ತಿಶಾಲಿಯಾಗಿದ್ದರೆ ಮಾತ್ರ ಕಾಂಗ್ರೆಸ್…

4 hours ago

ಮಂಗಳೂರು: ಸಚಿವ ಸಂಪುಟ ಸಭೆ ; ವಿಶೇಷ ತೆರೆದ  ಅಂಬಾರಿ ಬಸ್‌ನಲ್ಲಿ ಮುಖ್ಯಮಂತ್ರಿ, ಸಚಿವರ ಭವ್ಯ ಮೆರವಣಿಗೆ – vishwanews24

ಮಂಗಳೂರು: ಸಚಿವ ಸಂಪುಟ ಸಭೆ ; ವಿಶೇಷ ತೆರೆದ  ಅಂಬಾರಿ ಬಸ್‌ನಲ್ಲಿ ಮುಖ್ಯಮಂತ್ರಿ, ಸಚಿವರ ಭವ್ಯ ಮೆರವಣಿಗೆ ಮಂಗಳೂರು :…

4 hours ago

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ – vishwanews24

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

7 hours ago