ನಗರಾಭಿವೃದ್ಧಿ ಇಲಾಖೆ ಎಡವಟ್ಟು : 6 ತಿಂಗಳ ಹಿಂದೆ ಮೃತಪಟ್ಟ ಇಂಜಿನಿಯರ್ ಗೆ ವರ್ಗಾವಣೆ ಆದೇಶ – vishwanews24
ನಗರಾಭಿವೃದ್ಧಿ ಇಲಾಖೆ ಎಡವಟ್ಟು : 6 ತಿಂಗಳ ಹಿಂದೆ ಮೃತಪಟ್ಟ ಇಂಜಿನಿಯರ್ ಗೆ ವರ್ಗಾವಣೆ ಆದೇಶ
ಕಲಬುರಗಿ: ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದ ನಂತರ ಮೃತ ಇಂಜಿನಿಯರ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿ ಎಡವಟ್ಟು ಮಾಡಿಕೊಂಡಿದೆ.
ಯಾವುದೇ ಒಂದು ಸಂಘ, ಸಂಸ್ಥೆ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಬಗ್ಗೆ ಆಯಾ ಸಂಸ್ಥೆಯ ಮುಖ್ಯಸ್ಥರು ತಿಗಾ ವಹಿಸಿರುತ್ತಾರೆ. ಇನ್ನು ಕಂಪನಿ ಮುಖ್ಯಸ್ಥನಲ್ಲದಿದ್ದರೂ ಅವರ ಕೈಕೆಳಗಿರುವ ಆಡಳಿತ ಸಿಬ್ಬಂದಿ ಎಲ್ಲ ನೌಕರರ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತಾರೆ. ಆದರೆ, ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮೃತಪಟ್ಟು 6 ತಿಂಗಳಾದರೂ ಈ ಬಗ್ಗೆ ಸರ್ಕಾರಕ್ಕೆ ಮಾಹಿತಿಯೇ ಸಿಕ್ಕಿಲ್ಲ. ಜೊತೆಗೆ, ಇಂಜಿನಿಯರ್ ಮೃತಪಟ್ಟು 6 ತಿಂಗಳು ಗೈರು ಹಾಜರಾದರೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇದರ ಬದಲಾಗಿ ವಾರ್ಷಿಕ ವರ್ಗಾವಣೆ ಮಾಡುವಂತೆ ಮೃತ ಇಂಜಿನಿಯರ್ ಹೆಸರನ್ನು ಉಲ್ಲೇಖಿಸಿ ವರ್ಗಾವಣೆ ಆದೇಶ ಸಿದ್ಧಪಡಿಸಿ ಕಚೇರಿ ಮತ್ತು ಮನೆಯ ವಿಳಾಸಕ್ಕೆ ರವಾನೆ ಮಾಡಿದೆ.
ಈ ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆಯಲ್ಲಿ. ಮೃತ ಇಂಜಿನಿಯರ್ ಅಶೋಕ್ ಪುಟಪಾಕ್ ಎನ್ನುವವರು ಕಳೆದ 6 ತಿಂಗಳ ಹಿಂದೆ ಜನವರಿಯಲ್ಲಿಯೇ ಮೃತಪಟ್ಟಿದ್ದಾರೆ. ಆದರೆ, ಇದಾದ ನಂತರ ಜು.9ರಂದು ಈ ಇಂಜಿನಿಯರ್‌ನನ್ನು ನಗರಾಭಿವೃದ್ಧಿ ಇಲಾಖೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈಗ ಮೃತ ಅಧಿಕಾರಿ ಎಲ್ಲಿಂದ ಬಂದು ವರ್ಗಾವಣೆ ಪಡೆದು ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಜನರು ನಗಾಡಿಕೊಳ್ಳುತ್ತಿದ್ದಾರೆ.
ಮಗುಚಿ ಬಿದ್ದ ಟ್ರ್ಯಾಕ್ಟರ್: ಯುವಕ ಸ್ಥಳದಲ್ಲೇ ದುರ್ಮರಣ – vishwanews24
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದೆ. ಜನವರಿ 12ರಂದು ಮೃತಪಟ್ಟಿದ್ದ ಕಿರಿಯ ಇಂಜಿನಿಯರ್ ಅಶೋಕ ಅವರು, ಇಲಾಖೆಯ ನೌಕರ ಮೃತಪಟ್ಟಿದ್ದರು ಎಂಬ ಮಾಹಿತಿ ಇಲ್ಲದೆ ನಗರಾಭಿವೃದ್ಧಿ ಇಲಾಖೆ ಮೃತ ವ್ಯಕ್ತಿಯನ್ನ ವರ್ಗಾವಣೆ ಮಾಡಿ ಮುಜುಗುರಕ್ಕಿಡಾಗಿದೆ.
