ನನಗೂ ಸೇರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಬಿಜೆಪಿಗೆ ಬರುವಂತೆ ಐವತ್ತು ಕೋಟಿಯವರೆಗೂ ಆಮಿಷ ನೀಡಲಾಗಿತ್ತು : ಜೆಡಿಎಸ್ ಶಾಸಕ ಲಿಂಗೇಶ್ -Vishwanews24

Featured, ರಾಜ್ಯ ನ್ಯೂಸ್

ಹಾಸನ: ಬೇಲೂರಿನ ಜೆಡಿಎಸ್ ಶಾಸಕ ಲಿಂಗೇಶ್​ ಗುಜರಾತ್​ನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ದೇಶ ನಲುಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬೇಲೂರಿನಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಲಿಂಗೇಶ್​, ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ವಿರುದ್ಧ ಹರಿಹಾಯ್ದಿದ್ದಾರೆ. “ಗುಜರಾತ್​ನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ದೇಶ ನಲುಗುತ್ತಿದೆ. ಉತ್ತರ ಭಾರತೀಯರ ಕೈಯಲ್ಲಿ ಸರ್ಕಾರಗಳು ನಲುಗುತ್ತಿವೆ. ದಕ್ಷಿಣ ಭಾರತೀಯರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಡಿಕೆಶಿ ಬಂಧನವನ್ನು ಖಂಡಿಸಿದ ಜೆಡಿಎಸ್​ ಶಾಸಕ, ಇಡಿಯನ್ನು ಬಳಸಿಕೊಂಡು ಡಿಕೆ ಶಿವಕುಮಾರ್​​ ಅವರನ್ನು ಜೈಲಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಂವಿಧಾನಿಕ ಸಂಸ್ಥೆಗಳಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕಲಾಗುತ್ತಿದೆ. ಸ್ವಾಯತ್ತ ಸಂಸ್ಥೆ ಇಡಿಯನ್ನು ಬಳಸಿಕೊಂಡು ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಹಾಕಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.

ಆಪರೇಷನ್​ ಕಮಲದ ಬಗ್ಗೆ ಲಿಂಗೇಶ್ ವೇದಿಕೆಯಲ್ಲೇ  ಹೊಸ ಬಾಂಬ್​ ಸಿಡಿಸಿದರು. “ಬಿಜೆಪಿಯವರು ನನಗೆ‌ಮಾತ್ರ ಅಲ್ಲ, ಮಾಜಿ ಸಚಿವ ಹೆಚ್.ಡಿ ರೇವಣ್ಣನವರಿಗೂ ಆಮಿಷ ಒಡ್ಡಿದ್ದರು. ಉಪಮುಖ್ಯ ಮಂತ್ರಿಯಾಗಿ ಮಾಡುವುದಾಗಿ ಆಮಿಷ ನೀಡಿದ್ದರು. ಐದು ಕೋಟಿ ಅಲ್ಲ, ಐವತ್ತು ಕೋಟಿಯವರೆಗೂ ನನಗೂ ಸೇರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಬಿಜೆಪಿಗೆ ಬರುವಂತೆ ಆಮಿಷ ನೀಡಲಾಗಿತ್ತು,” ಎಂದರು.