ನನಗೆ ಮುಸ್ಲಿಂ – ಹಿಂದುಗಳು ಎಂಬ ಬೇಧ ಭಾವ ಇಲ್ಲ, ನಾನು ಸೋತರೆ ಗೆದ್ದವರ ಬಳಿ ಕೆಲಸ ಮಾಡಿಸುತ್ತೇನೆ :ಪ್ರಕಾಶ್ ರಾಜ್ – Vishwanews24
ಬೆಂಗಳೂರು: ನಾನು ಗೆದ್ದರೆ ಕೆಲಸ ಮಾಡುತ್ತೇನೆ. ಸೋತರೆ ಗೆದ್ದವನ ಬಳಿ ಕೆಲಸ ಮಾಡಿಸುತ್ತೇನೆ. ನಾನು 5 ವರ್ಷಕ್ಕೆ ಬಂದಿಲ್ಲ. ಬದಲಾಗಿ ಮುಂದಿನ ದಿನಗಳಿಗಾಗಿ ಬಂದಿದ್ದೇನೆ ಎಂದು ಬೆಂಗಳೂರು ಕೇಂದ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ನಟ ಪ್ರಕಾಶ್ ರಾಜ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಯಾರೋ ದೊಡ್ಡ ನಾಯಕರೊಬ್ಬರು ಹೇಳಿದರು. 3 ಲಕ್ಷ ಮತಗಳನ್ನು ಪಡೆದುಕೊಳ್ಳುತ್ತೇನೆ ಎಂದು. ಮೂರು ಲಕ್ಷ ಮತ ಬಂದರೆ ಪರ್ಯಾಯ ರಾಜಕಾರಣಕ್ಕೆ ಅಲ್ಲಿನ ಜನ ಬಯಸುತ್ತಿದ್ದಾರೆ ಎಂದರ್ಥ. ಜೆಡಿಎಸ್ ಮತ್ತು ಕಾಂಗ್ರೆಸ್ ಸೆಕ್ಯುಲರಿಸ್ಟ್ ಎಂದು ಹೇಳಿದರೆ ನಾವು ಒಪ್ಪಿಕೊಳ್ಳಬೇಕಾಗಿಲ್ಲ. ನನಗೆ ಮುಸ್ಲಿಂ – ಹಿಂದುಗಳು ಎಂಬ ಬೇಧ ಭಾವ ಇಲ್ಲ. ಮನುಷ್ಯ ಇದ್ದ ಕಡೆ ವಿಕೃತ ಮನಸ್ಸುಗಳು ಇವೆ ಎಂದರು.
ಸೆಕ್ಯುಲರ್ ಅಂದರೆ ಎಲ್ಲರೂ. ನನಗೆ ಜಾತಿ ಲೆಕ್ಕಚಾರ ಬೇಡ. ನನಗೆ ಜನಮುಖ್ಯ. ನಾನು ಯಾವುದೇ ಪಕ್ಷದ ಪರವಾಗಿ ಇಲ್ಲ. ನಾನು ಪರ್ಯಾಯ ರಾಜಕೀಯ ಮಾಡುವುದಕ್ಕೆ ಬಂದಿದ್ದೇನೆ. ನನಗೆ ಏನು ಬೇಡ ಎಂಬುದು ನನಗೆ ಗೊತ್ತು. ಪ್ರಯಾಣ ನನ್ನನ್ನು ನಿರ್ಧರಿಸುತ್ತದೆ, ನಾನು ಪ್ರಯಾಣವನ್ನು ನಿರ್ಧರಿಸುವುದಿಲ್ಲ. ಗೌರಿ ಹೋಗುವರೆಗೂ ನನಗೆ ರಾಜಕೀಯಕ್ಕೆ ಬರಬೇಕು, ಆಕ್ಟಿವಿಸ್ಟ್ ಆಗಬೇಕು ಎಂದು ಗೊತ್ತಿರಲಿಲ್ಲ. ಮುಂದಿನ ದೇಶಕ್ಕಾಗಿ ಇರಬೇಕು ಎಂದುಕೊಂಡೆ ಎಂದರು..
