ನನಗೆ ಯಾವುದೇ ಒಬ್ಬ ಬಿಜೆಪಿ ಕಾರ್ಯಕರ್ತ ನನಗೆ ಕರೆ ಮಾಡಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಬೇಡಿ ಎಂದು ಹೇಳಿಲ್ಲ : ರಘುಪತಿ ಭಟ್ vishwanews24

ಉಡುಪಿ, ರಾಜ್ಯ ನ್ಯೂಸ್

Mysore :ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಸಿದ ನಂತರ ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿ” ನಾನೋಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಹಾಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ಮಿಸ್ಸಾಗಿತ್ತು ಆದರೂ ನಾನು ಬಿಜೆಪಿ ತೊರೆದಿಲ್ಲ ಮತ್ತು ಕಾಂಗ್ರೇಸ್ ಪಕ್ಷದಿಂದ ಆವಾಗಲೇ ನನಗೆ ಅಹ್ವಾನವಿತ್ತು ಆದರೇ ನಾನು ಬಿಜೆಪಿ ಬಿಟ್ಟು ಹೋಗಿಲ್ಲ ನಂತರ ಇಡೀ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ, ನಂತರ ವಿಧಾನ ಪರಿಷತ್ ಚುನಾವಣೆಯ ತಯಾರಿ ಮಾಡುವಾಗಲೂ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರೆದು ಮತದಾರರ ನೋಂದಾವಣಿ ಮಾಡಿರುವಂತದ್ದು ಇಷ್ಟೆಲ್ಲಾಮಾಡಿದ ನಂತರ ಏಕಾಏಕಿ ನಿನ್ನೆ ಮೊನ್ನೆ ಪಾರ್ಟಿಗೆ ಬಂದವರಿಗೆ ಬಿಜೆಪಿ ಟಿಕೆಟ್ ಕೊಡುವುದು ತಪ್ಪಾಗಿದೆ ಹಾಗಾಗಿ ಈ ನಿರ್ಧಾರಕ್ಕೆ ಬಂದಿರುವುದು ಮತ್ತು ನನಗೆ ಯಾವುದೇ ಒಬ್ಬ ಬಿಜೆಪಿ ಕಾರ್ಯಕರ್ತ ನನಗೆ ಕರೆ ಮಾಡಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಬೇಡಿ ಎಂದು ಹೇಳಿಲ್ಲ ಹಾಗಾಗಿ ಚುನಾವಣೆಯಿಂದ ಹಿಂದೆ ಬರುವ ಪ್ರಶ್ನೆಯೇ ಇಲ್ಲ ಎಂದರು.

Leave a Reply