ನನ್ನನು ಕೊಲ್ಲುವುದರಿಂದ ಅವರಿಗೆ ತೃಪ್ತಿ ಸಿಗುವುದಾದರೆ ಎನ್ ಕೌಂಟರ್ ಮಾಡಲಿ : ಜನಾರ್ದನ ಪೂಜಾರಿ
ಮಂಗಳೂರು, :ಎನ್ ಕೌಂಟರ್ ಮಾಡಿ ಸಾಯಿಸಬೇಕು ಎಂದು ಬೆದರಿಕೆ ಆಡಿಯೋ ಸಂದೇಶ ನೀಡಿದ್ದ ವ್ಯಕ್ತಿಗೆ ನನ್ನನ್ನು ಕೊಲ್ಲೊವುದರಿಂದ ತೃಪ್ತಿ ಸಿಗುವುದಾದರೆ ಕೊಂದು ಹಾಕಿ, ಸಾಯುವವರೆಗೆ ನಾನು ಇದನ್ನೇ ಹೇಳುತ್ತೇನೆ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ತೀಳಿಸಿದ್ದಾರೆ.
ವೃದ್ಧಾಶ್ರಮದಲ್ಲಿ ಸೋನಿಯಾ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಹಣ್ಣು-ಹಂಪಲು ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ರಾಮನನ್ನು ನಂಬಿ ಎಂದು ಹಿಂದುಗಳಿಗೆ, ಮೊಹಮ್ಮದ್ ಪೈಗಂಬರ್ ಅವರನ್ನು ನಂಬಿ ಎಂದು ಮುಸ್ಲಿಮರಿಗೆ, ಏಸುವನ್ನು ನಂಬಿ ಎಂದು ಕ್ರಿಶ್ಚಿಯನ್ರಿಗೆ ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದರು.ನಾನು ರಾಮ ದೇವರನ್ನು, ಮುಹಮ್ಮದ್ ಪೈಗಂಬರ್ ಮತ್ತು ಏಸುವನ್ನು ದೇವರೆಂದು ನಂಬುತ್ತೇನೆ ಎಂದು ಹೇಳಿದರು.
