ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ ; ನಾನು ನಿಷ್ಕಳಂಕ ರಾಜಕಾರಣಿ : ರೇವಣ್ಣ ಭಾವುಕ – Vishwanews24
ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ : ರೇವಣ್ಣ ಭಾವುಕ
ಬೆಂಗಳೂರು: ‘ನನ್ನ ಇಪ್ಪತ್ತೈದು ವರ್ಷಗಳ ರಾಜಕಾರಣದಲ್ಲಿ ಈ ರೀತಿ ಅಪಾದನೆ ಯಾವತ್ತೂ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿ, ನನಗೆ ಹಿಂಸೆ ಕೊಟ್ಟು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಎಸ್‌ಐಟಿ ಅಧಿಕಾರಿಗಳು ಒತ್ತಡಹಾಕಿದರು’ ಎಂದು ಎಸ್ ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ, ಎಚ್.ಡಿ.ರೇವಣ್ಣ ಅವರು ನ್ಯಾಯಾಧೀಶರ ಎದುರು ಹೇಳಿದ್ದಾರೆ.
ಲೈಂಗಿಕ ಹಗರಣದ ಶೋಷಿತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಬುಧವಾರ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ನ್ಯಾಯಾಧೀಶರು, ರೇವಣ್ಣ ಅವರಿಗೆ ಪ್ರಕರಣ ಕುರಿತು ವಿಚಾರಿಸಿದರು. ಆಗ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ರೇವಣ, ರಾಜಕೀಯ ಷಡ್ಕಂತ್ರ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
SSLC ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ , ದ.ಕ ದ್ವಿತೀಯ – Vishwanews24
“ನಾನು 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಎಂದಿಗೂ ಈ ರೀತಿ ಅಪಾದನೆ ಬಂದಿಲ್ಲ. ನಾನು ನಿಷ್ಕಳಂಕ ರಾಜಕಾರಣಿಯಾಗಿದ್ದೇನೆ. ನಾನು ತಪ್ಪು ಮಾಡಿಲ್ಲ. ಮಹಿಳೆ ಅಪಹರಣ ನಡೆದ ದಿನ ನಾನು ಊರಿನಲ್ಲೇ ಇರಲಿಲ್ಲ. ನಾನು ಯಾರಿಗೂ ಕರೆ ಮಾಡಿ ಮಾತು ಸಹ ಆಡಿಲ್ಲ. ಹೀಗಿದ್ದರೂ ನನ್ನನ್ನು ಮಹಿಳೆ ಅಪಹರಣದಲ್ಲಿ ಆರೋಪಿ ಮಾಡಿದ್ದಾರೆ’ ಎಂದು ತಿಳಿಸಿದರು.
‘ನನಗೆ ಎಸ್‌ಐಟಿ ಅಧಿಕಾರಿಗಳು ವಿವ ದೀತ ತೊಂದರೆ ಕೊಟ್ಟಿದ್ದಾರೆ. ವೈದ್ಯರು ಚಿಕಿತ್ಸೆ ಕೊಡಿಸುವಂತೆ ಹೇಳಿದರೂ ಕೂಡ ನನಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಯನ್ನು ಅಧಿಕಾರಿಗಳು ಕೊಡಿಸಿಲ್ಲ. ನಿನ್ನೆ ವಿಚಾರಣೆ ಎಲ್ಲ ಮುಗಿದಿದೆ ಎಂದು ಹೇಳಿ. ನನ್ನನ್ನು ಆಸ್ಪತ್ರೆಯಿಂದ ಅಧಿಕಾರಿಗಳು ಕರೆ ತಂದರು. ಆದರೆ ಇಂದು ಬೆಳಗ್ಗೆ ಮತ್ತೆ 2 ಗಂಟೆಗಳು ವಿಚಾರಣೆ ಮಾಡಿ ನನಗೆ ಕಿರು ಕುಳ ಕೊಟ್ಟಿದ್ದಾರೆ. ನಾನು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಅಧಿಕಾರಿಗಳು ಒತ್ತಡ ಹಾಕಿದರು. ಮಾಡದ ತಪ್ಪನ್ನು ಹೇಗೆ ಒಪ್ಪಿ ಕೊಳ್ಳಲಿ ಎಂದು ರೇವಣ್ಣನಿವೇದಿಸಿದರು.
ಕಾರಣವಿಲ್ಲದೆ ರಜೆ ಹಾಕಿದ 25 ಸಿಬ್ಬಂದಿಯನ್ನು ವಜಾಗೊಳಿಸಿದ ಏರ್ ಇಂಡಿಯಾ – Vishwanews24
ನಾನು ನನ್ನ ಕೈಲಾದ ಮಟ್ಟಿಗೆ ಅಧಿಕಾರಿ ಗಳ ತನಿಖೆಗೆ ಸಹಕರಿಸಿದ್ದೇನೆ. ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದಕ್ಕಿಂತ ಅನ್ನು ತನಿಖೆಗೆ ಸಹರಿಸಲು ನನ್ನಿಂದ ಸಾಧ್ಯವಿಲ್ಲ ಕಳೆದ ಮೂರು ದಿನಗಳಿಂದ ನಾನು ನಿದ್ದೆ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನಾನು ಸಭ್ಯ ರಾಜಕಾರಣ ಮಾಡಿದ್ದೇನೆ. ಕಾನೂನಿಗೆ ತಲೆಬಾಗಿ ನಡೆದುಕೊಂಡಿದ್ದೇನೆ ಎಂದು ಭಾವುಕರಾಗಿ ನುಡಿದರು.
