“ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಯವರಿಗೆ, ಈ ಅದ್ಭುತ ಭೇಟಿಗೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ -Vishwanews24
ಅಹಮದಾಬಾದ್: ಭಾರತಕ್ಕೆ ಬಂದಿಳಿದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅಲ್ಲಿಂದ ನೇರವಾಗಿ ಮಹಾತ್ಮಾ ಗಾಂಧಿಯವರ ಸಾಬರಮತಿ ಆಶ್ರಮಕ್ಕೆ ತೆರಳಿದರು.
ಸಾಬರಮತಿ ಆಶ್ರಮಕ್ಕೆ ಆಗಮಿಸಿದ ಟ್ರಂಪ್ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ ಆಶ್ರಮಕ್ಕೆ ಕರೆದುಕೊಂಡು ಹೋದರು. ಆಶ್ರಮದಲ್ಲಿ ಚರಕದ ಬಗ್ಗೆ ವಿವರಿಸಿದ ಮೋದಿ, ಚರಕದಿಂದ ನೂಲು ತೆಗೆಯುವುದು ಹೇಗೆ ಎಂಬುದನ್ನು ಟ್ರಂಪ್ ದಂಪತಿಗಳಿಗೆ ತಿಳಿಸಿಕೊಟ್ಟರು. ಸ್ವತಃ ಟ್ರಂಪ್ ಚರಕದಿಂದ ನೂಲು ತೆಗೆದರು.
ನಂತರ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್, “ನನ್ನ ಉತ್ತಮ ಸ್ನೇಹಿತ ಪ್ರಧಾನಿ ಮೋದಿಯವರಿಗೆ, ಈ ಅದ್ಭುತ ಭೇಟಿಗೆ ಧನ್ಯವಾದಗಳು” ಎಂಬುದಾಗಿ ಬರೆದರು. ಇದರ ಕೆಳಗೆ ಟ್ರಂಪ್ ಮತ್ತು ಮೆಲಾನಿಯಾ ಇಬ್ಬರೂ ಸಹಿ ಮಾಡಿದರು.
Gujarat: US President Donald Trump writes a message in the visitors' book at the Sabarmati Ashram, 'To my great friend Prime Minister Modi…Thank You, Wonderful Visit!' pic.twitter.com/mxpJbSMg4W
— ANI (@ANI) February 24, 2020
