ನನ್ನ ಜೀವಿತಾವಧಿಯಲ್ಲಿ ಈ ದಿನವನ್ನು ನೋಡಲು ನಾನು ಕಾಯುತ್ತಿದ್ದೆ , ಪ್ರಧಾನ ಮಂತ್ರಿಯವರೇ ನಿಮಗೆ ಧನ್ಯವಾದಗಳು : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್ -Vishwanews24

Featured, ದೇಶ, ರಾಷ್ಟ್ರ ನ್ಯೂಸ್
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್  ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
”ಪ್ರಧಾನ ಮಂತ್ರಿಯವರೇ ನಿಮಗೆ ತುಂಬು ಧನ್ಯವಾದಗಳು, ನನ್ನ ಜೀವಿತಾವಧಿಯಲ್ಲಿ ಈ ದಿನವನ್ನು ನೋಡಲು ನಾನು ಕಾಯುತ್ತಿದ್ದೆ” ಅವರು ನಿಧನಕ್ಕೂ ಮುನ್ನ ನಿನ್ನೆ ಸಾಯಂಕಾಲ 7.23ಕ್ಕೆ ಒಂದು ಟ್ವೀಟ್  ಮಾಡಿದ್ದರು. ಆ ಟ್ವೀಟ್ ಅನೇಕರಿಗೆ ಖುಷಿ ಕೊಟ್ಟಿದ್ದು ಮಾತ್ರವಲ್ಲದೆ ಕಣ್ಣಲ್ಲಿ ನೀರು ತರಿಸಿದ್ದು ಸುಳ್ಳಲ್ಲ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿ 370ನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದಕ್ಕಾಗಿ ಅವರು ತೀವ್ರ ಹರ್ಷಗೊಂಡಿದ್ದರು. ದೇಶಕ್ಕೆ ಸಂಬಂಧಪಟ್ಟ ವಿಚಾರವಿರಲಿ, ರಾಜಕೀಯ ವಿಚಾರವಿರಲಿ ಅವರು ಭಾರತೀಯ ಜನತಾ ಪಕ್ಷದಲ್ಲಿ ಅಗ್ರಪಂಕ್ತಿಯ ನಾಯಕರ ಜೊತೆಯಲ್ಲಿಯೇ ತಮ್ಮ ಜೀವಿತಾವಧಿಯಲ್ಲಿ ಹೋರಾಡಿದವರು. ಜಮ್ಮು-ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಕೂಡ ಅವರು ಹೋರಾಟ ಮಾಡಿಕೊಂಡು ಬಂದಿದ್ದರು.