ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ? ಯಾರೂ ನನ್ನ ಹಾಗೆ ಸಾಲಮನ್ನಾ ಮಾಡಿಲ್ಲ : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಮಂಡ್ಯ: ನನ್ನ ಟೀಕೆ ಮಾಡುವವರಿಗೆ ಯೋಗ್ಯತೆ ಇದೆಯಾ ? ಕೆ.ಆರ್.ಪೇಟೆ ತಾಲೂಕಿನ 22 ಸಾವಿರ ರೈತ ಕುಟುಂಬದ ಸಾಲಮನ್ನಾ ಆಗಿದೆ. ಇತಿಹಾಸದಲ್ಲಿ ಯಾರೂ ನನ್ನ ಹಾಗೆ ಸಾಲಮನ್ನಾ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನಿನ್ನೆ ವಿಧಿವಶರಾದ ಕೆ.ಆರ್. ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ವೆಂಕಟ ಸುಬ್ಬೆಗೌಡರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಅವರು, ಇತಿಹಾಸದಲ್ಲಿ ಯಾರು ಕೂಡಾ ನನ್ನ ಹಾಗೆ ಸಾಲಮನ್ನಾ ಮಾಡಿಲ್ಲ. ಸಿದ್ದರಾಮಯ್ಯ ಮಾಡಿದ ಸಾಲಮನ್ನಾ ಚೆನ್ನಾಗಿದೆಯಂತೆ, ನನ್ನದು ಸರಿ ಇಲ್ಲವಂತೆ. ನಾನು 14 ತಿಂಗಳು ಮಾಡಿದ ಕಾರ್ಯಕ್ರಮದ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇನೆ. ಮಂಡ್ಯ ಜನ ಸ್ವಾಭಿಮಾನ ಉಳಿಸಿದರು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಮಂಡ್ಯ ಜಿಲ್ಲೆಯ ರೈತರ ಕಬ್ಬು ಖರೀದಿ ಮಾಡುವವರು ಯಾರೂ ಇಲ್ಲ. ಅದರ ಬಗ್ಗೆ ಸಿದ್ದುಗೆ ಚಿಂತೆ ಇಲ್ಲ ಎಂದು ಟೀಕಿಸಿದರು.

ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇದ್ದರೆ, ಕಟಾವಿಗೆ ಬಂದಿರುವ ಕಬ್ಬು ಮಾರಾಟ ಮಾಡಿಸಿ. ಸಿದ್ದರಾಮಯ್ಯಗೆ ನಾನೇನು ವಿಶ್ವಾಸ ದ್ರೋಹ ಮಾಡಿಲ್ಲ. ಅದನ್ನು ಜನ ತೀರ್ಮಾನ ಮಾಡುತ್ತಾರೆ” ಎಂದು ಸಿದ್ದರಾಮಯ್ಯಗೆ, ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.