ನನ್ನ ನಾಯಕತ್ವದಲ್ಲಿ ವಿಶ್ವಾಸವಿಲ್ಲದಿದ್ದರೆ ನಾನು ನಾಯಕತ್ವದ ತ್ಯಜಿಸಲು ಸಿದ್ದ : ಕುಮಾರಸ್ವಾಮಿ -Vishwanews24
ಬೆಂಗಳೂರು : ನನ್ನ ನಾಯಕತ್ವದಲ್ಲಿ ಯಾರಿಗಾದರೂ ವಿಶ್ವಾಸವಿಲ್ಲದೇ ಇದ್ದರೆ ಹೊಸ ನಾಯಕತ್ವ ಹುಡುಕಿಕೊಳ್ಳಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನಾಯಕತ್ವದಲ್ಲಿ ವಿಶ್ವಾಸವಿಲ್ಲದಿದ್ದರೆ ನಾನು ನಾಯಕತ್ವದ ತ್ಯಜಿಸಲು ಸಿದ್ದ. ನಾನು ಇದುವರೆಗೂ ಎಲ್ಲರನ್ನೂ ಗೌರವಯುತವಾಗಿ ನಡೆಸಿಕೊಂಡಿದ್ದೇನೆ. ಅವರಿಗೆ ನನ್ನಲ್ಲಿ ವಿಶ್ವಾಸವಿಲ್ಲದೇ ಇದ್ದರೆ ಬೇಕಾದ ನಾಯಕನನ್ನು ಆಯ್ದುಕೊಳ್ಳಲಿ. ನನ್ನ ವರ್ತನೆ ವಿಚಾರದಲ್ಲಿ ಯಾರಿಂದಲೂ ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
