ನನ್ನ ವೈಯಕ್ತಿಕ ನಂಬಿಕೆ ಭಕ್ತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ : ಡಿ.ಕೆ.ಶಿವಕುಮಾರ್ – vishawanews24

Featured, ರಾಜ್ಯ ನ್ಯೂಸ್

ನಾನು ಕುಂಭಮೇಳಕ್ಕೆ ಹೋಗುತ್ತೇನೋ ಇಲ್ಲವೋ ಎಂಬುದು ಸಂಪೂರ್ಣವಾಗಿ ನನ್ನ ನಿರ್ಧಾರ  : ಡಿ.ಕೆ.ಶಿವಕುಮಾರ್ 

ಬೆಂಗಳೂರು: ಉತ್ತರ ಪ್ರದೇಶದ ಪುಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ “ಇದು ನನ್ನ ವೈಯಕ್ತಿಕ ನಂಬಿಕೆ ಭಕ್ತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಬುಧವಾರ ಹೇಳಿದ್ದಾರ.

ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಗೆ ಸಂಬಂಧಿಸಿ ಕುಂಭಮೇಳಕ್ಕೆ ಭೇಟಿ ನೀಡುವ ಕುರಿತು ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್ “ಯಾರು ಬೇಕಾದರೂ ಏನು ಬೇಕಾದರೂ ಹೇಳಲಿ, ನಮ್ಮ ಧರ್ಮ ಮತ್ತು ಕರ್ಮ, ನಮ್ಮ ಆಚರಣೆಗಳು, ಸಂಪ್ರದಾಯಗಳು ಮತ್ತು ನಂಬಿಕೆಗಳ ವಿಷಯವಾಗಿದೆ” ಎಂದರು.

ಗಂಗಾ, ಕಾವೇರಿ, ಕೃಷ್ಣಾ, ಬ್ರಹ್ಮಪುತ್ರ, ಅರ್ಕಾವತಿ ಮತ್ತು ವೃಷಭಾವತಿ ನದಿಗಳೆಲ್ಲ ಯಾರಿಗೂ ಸೇರಿದ್ದಲ್ಲ.ನೀರಿಗೆ ಬಣ್ಣ, ರುಚಿ ಅಥವಾ ಆಕಾರವಿಲ್ಲ. ಪ್ರತಿಯೊಬ್ಬರಿಗೂ ನೀರು ಬೇಕು. ಜನರು ಏನು ಬೇಕಾದರೂ ಹೇಳುತ್ತಾರೆ” ಎಂದರು.

ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳು ಭಾರತಕ್ಕೆ ವಾಪಾಸ್ – vishwanews24

ಆರ್. ಅಶೋಕ್ ಅವರ ಸಮಸ್ಯೆ ಏನು ಎಂದು ನನಗೆ ತಿಳಿದಿಲ್ಲ. ಬಹುಶಃ ಅವರಿಗೆ ಏನಾದರೂ ಸಮಸ್ಯೆ ಇರಬಹುದು. ನನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ನಂಬಿಕೆ ಮತ್ತು ಭಕ್ತಿ ನನ್ನ ವೈಯಕ್ತಿಕ ವಿಷಯಗಳು, “ಎಂದರು.

ಶಿವಕುಮಾರ್ ಅವರು ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ತತ್ ಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆಯಾಗುತ್ತದೆಯೇ?” ಎಂದು ವಿಪಕ್ಷ ನಾಯಕ ಆ‌ರ್.ಅಶೋಕ್ ಪುಶ್ನೆ ಮಾಡಿದ್ದರು.

ನಾನು ಕುಂಭಮೇಳಕ್ಕೆ ಹೋಗುತ್ತೇನೋ ಇಲ್ಲವೋ ಎಂಬುದು ಸಂಪೂರ್ಣವಾಗಿ ನನ್ನ ನಿರ್ಧಾರ. ಇದು ನನ್ನ ವೈಯಕ್ತಿಕ ನಂಬಿಕೆಯ ವಿಷಯ. ನಾನು ಹೋಗುವುದು ಅಥವಾ ಹೋಗದಿರುವುದು ನನ್ನ ವೈಯಕ್ತಿಕ” ಎಂದರು.

ಖರ್ಗೆಯವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, “ಅವರು ಅದನ್ನು ನಿರ್ದಿಷ್ಟ ಸಂದರ್ಭದಲ್ಲಿ ಹೇಳಿದ್ದಾರೆ, ಆದರೆ ಮಾಧ್ಯಮಗಳು ಅದನ್ನು ಏಕ ವಿವಾದ ಮಾಡುತ್ತಿವೆ?” ಎಂದು ಪ್ರಶ್ನಿಸಿದರು.

ಪಕ್ಷ ಕಟ್ಟೋ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಅನ್ನೋದು ನಿಜ : ರೇಣುಕಾಚಾರ್ಯ – vishwanews24

Leave a Reply