ಮುಂಬೈ : 2 ದಿನಗಳ ಹಿಂದೆ ಗರ್ಭ ಕಂಠದ ಕ್ಯಾನ್ಸರಿನಿಂದ ಸಾವನ್ನಪ್ಪಿದ್ದ ನಟಿ ಪೂನಂ ಪಾಂಡೆ ಅವರು ಜೀವಂತವಿದ್ದಾರೆ. ತಮ್ಮ ಸಾವಿನ ಸುದ್ದಿ ವೈರಲ್ ಆಗಿರುವ ಬೆನ್ನಲ್ಲೇ ನಟಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ಕ್ಷಮಿಸಿ, ನನ್ನ ಸಾವಿನಿಂದ ಬೇಸರದಲ್ಲಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಹಾಗೆ ಮಾಡಿದ್ದು ನಿಮಗೆಲ್ಲರಿಗೂ ಶಾಕ್ ಕೊಡುವುದಕ್ಕೆ ಮಾತ್ರ ಎಂದು ನಟಿ ಪೂನಂ ಪಾಂಡೆ ಅವರು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.ನಾನು ನನ್ನ ಸಾವನ್ನು ನಾನು ಫೇಕ್ ಮಾಡಿದೆ. ನನ್ನ ಉದ್ದೇಶ ನಿಮ್ಮೆಲ್ಲರನ್ನು ಶಾಕ್ ಮಾಡುವುದು ಮಾತ್ರ. ಗಂಭೀರವಾಗಿರುವ ವಿಚಾರದ ಬಗ್ಗೆ ಎಲ್ಲರಿಗೂ ಶಾಕ್ ಕೊಡಲು ಹೀಗೆ ಮಾಡಿದೆ.
ನಾವು ಸೈಲೆಂಟಾಗಿ ಜೀವ ತೆಗೆಯುವ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಸಾಕಷ್ಟು ಮಾತನಾಡುತ್ತಿಲ್ಲ ಅಲ್ಲವೇ? ಆದರೆ ನನ್ನ ಸಾವು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಿಮ್ಮನ್ನು ಚರ್ಚಿಸುವಂತೆ ಮಾಡಿದೆ ಎಂದಿದ್ದಾರೆ. ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಾವು ಮಾತನಾಡಬೇಕಾಗಿದೆ. ಆದರೆ ಯಾರೂ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಈ ರೋಗಕ್ಕೆ ಅಟೆನ್ಶನ್ ಬೇಕಾಗಿತ್ತು. ಇದಕ್ಕೆ ಸ್ಪಾಟ್ಲೈಟ್ ಬೇಕಾಗಿತ್ತು ಎಂದಿದ್ದಾರೆ.
ನನ್ನ ಸಾವಿಗೆ ಈ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಯಿತು ಎನ್ನುವುದರಲ್ಲಿ ನನಗೆ ಖುಷಿ ಇದೆ. ಸರ್ವಿಕಲ್ ಕ್ಯಾನ್ಸರ್ಗಾಗಿ ನಾನು ನನ್ನ ಸಾವನ್ನು ಫೇಕ್ ಮಾಡಿದೆ ಎಂದಿದ್ದಾರೆ. ಇದು ಸೈಲೆಂಟ್ ಆಗಿ ನಮ್ಮ ಜೀವವನ್ನು ತೆಗೆಯುವ ಒಂದು ರೋಗ. ನನ್ನ ಸಾವಿನ ಸುದ್ದಿ ಮಾಡಿರುವ ಪರಿಣಾಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ನಟಿ ಹೇಳಿದ್ದಾರೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…