ನನ್ನ ಸೋಲಿಗೆ ನಾನೇ ಹೊಣೆ ; ರಾಜ್ಯದ್ಯಾಂತ ಪ್ರವಾಸ ಕೈಗೊಂಡು ಜನರ ಕಷ್ಟ-ಸುಖಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ : ನಿಖಿಲ್​​ ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮಂಡ್ಯದಲ್ಲಿ ನನ್ನ ಸೋಲಿಗೆ ನಾನೇ ಕಾರಣ ಎಂದು ಜೆಡಿಎಸ್​​​ ಪರಾಭವ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಅವರು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

ಮಂಡ್ಯ ರಾಜಕರಣದ ಬಗ್ಗೆ ಮಾತನಾಡಿರುವ ಅವರು ನೂತನ ಸಂಸದೆ ಸುಮಲತಾ ಅಂಬರೀಷ್​​ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸೋಲಿನ ಬಗ್ಗೆ ಮಾತನಾಡಿದ ಅವರು ​​ನನ್ನ ಸೋಲಿಗೆ ನಾನು ಹೊಣೆ. ಯಾವುದೇ ಶಾಸಕರು, ಎಂಎಲ್​​ಸಿ, ಮುಖ್ಯಮಂತ್ರಿ ಹಾಗೂ ಜೆಡಿಎಸ್​​​​​​ ಮುಖ್ಯಸ್ಥ ದೇವೇಗೌಡರು ಯಾರು ಹೊಣೆಯಲ್ಲ ಎಂದು ತಮ್ಮ ಸೋಲನ್ನು ಪರಾಮರ್ಶಿಸಿಕೊಂಡಿದ್ದಾರೆ.

ಮಂಡ್ಯ ಜನತೆ ನಿಖಿಲ್​​ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಕಾರ್ಯಕರ್ತರ ನಿರೀಕ್ಷೆಯನ್ನು ಹುಸಿ ಮಾಡಿರುವುದಕ್ಕೆ ಅವರಿಗೆ ಕ್ಷಮೆ ಕೋರುತ್ತೇನೆ. ಮುಂದಿನ ದಿನಗಳಲ್ಲಿ ಮಂಡ್ಯ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರಾಜ್ಯದ್ಯಾಂತ ಪ್ರವಾಸ ಕೈಗೊಂಡು ಜನರ ಕಷ್ಟ-ಸುಖಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಶೀಘ್ರದಲ್ಲಿ ಸುದ್ದಿಗೋಷ್ಠಿ ನಡಸಿ ಮುಂದಿನ ಯೋಜನೆಯಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ನಿಖಿಲ್​​ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರೆಬಲ್​​ಸ್ಟಾರ್​​ ಅಂಬರೀಷ್​​​ ಪುತ್ರ ಅಭಿಷೇಕ್​​ ಅಂಬರೀಷ್​​​​​​​​​ ಅವರ ಅಮರ್​​ ಚಿತ್ರ ಮೇ 31 ರಂದು ಬಿಡುಗಡೆಯಾಗಲಿದ್ದು, ನಿಖಿಲ್​​ ಅವರಿಗೆ ಶುಭಾಶಯ ಕೋರಿದ್ದಾರೆ.