ನನ್ನ ಹತ್ತಿರ ಇನ್ನೂ ಹತ್ತೊಂಭತ್ತು ಸಿಡಿ ಇವೆ ಅಂತ ಹೇಳ್ತಾರಲ್ಲಾ , ಹಾಗಿದ್ದರೇ.. ದಿನೇಶ್ ಕಲ್ಲಹಳ್ಳಿಯೇ ಸಿಡಿ ಮಾಡಿಸಿರಬೇಕು : ಹೆಚ್ ಡಿ ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಯಾರದ್ದೇ ಖಾಸಗಿ ಬದುಕನ್ನು ಹೀಗೆ ಸಿಡಿ ಬಿಡುಗಡೆ ಮಾಡಿ, ಹರಾಜು ಹಾಕೋದು ತಪ್ಪು..

ನನ್ನ ಹತ್ತಿರ ಇನ್ನೂ ಹತ್ತೊಂಭತ್ತು ಸಿಡಿ ಇವೆ ಅಂತ ಹೇಳ್ತಾರಲ್ಲಾ , ಹಾಗಿದ್ದರೇ.. ದಿನೇಶ್ ಕಲ್ಲಹಳ್ಳಿಯೇ ಸಿಡಿ ಮಾಡಿಸಿರಬೇಕು : ಹೆಚ್ ಡಿ ಕುಮಾರಸ್ವಾಮಿ -Vishwanews24

ಮೈಸೂರು : ಯಾರದ್ದೇ ಖಾಸಗಿ ಬದುಕನ್ನು ಹೀಗೆ ಸಿಡಿ ಬಿಡುಗಡೆ ಮಾಡಿ, ಹರಾಜು ಹಾಕೋದು ತಪ್ಪು. ನನ್ನ ಹತ್ತಿರ ಇನ್ನೂ ಹತ್ತೊಂಭತ್ತು ಸಿಡಿ ಇವೆ ಅಂತ ಹೇಳ್ತಾರಲ್ಲಾ.. ಹಾಗಿದ್ದರೇ.. ದಿನೇಶ್ ಕಲ್ಲಹಳ್ಳಿಯೇ ಸಿಡಿ ಮಾಡಿಸಿರಬೇಕು ಅನಿಸುತ್ತದೆ. ಆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ : ಇಬ್ಬರ ಬಂಧನ ; 11 ಲಕ್ಷ ಮೌಲ್ಯದ ಚಿನ್ನ ವಶ -Vishwanews24

ನಗರದಲ್ಲಿ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆ ಕುರಿತಂತೆ ಮಾತನಾಡಿದ ಅವರು, ಸಂತ್ರಸ್ಥೆ ಬಗ್ಗೆ ಮಾತು ಆ ನಂತರ ಇರಲಿ, ಮೊದಲು ಸಿಡಿ ವಿಚಾರವಾಗಿ ಮಾತನಾಡುವವನನ್ನ ಬಂಧಿಸಲಿ. ಇನ್ನೂ ನಾಲ್ಕು, ಹತ್ತೊಂಬೊತ್ತು ಸಿಡಿ ಇವೆ ಅನ್ನೋದು ಬ್ಲಾಕ್‌ಮೇಲ್‌ ಆಗಿದೆ. ಯಾರದ್ದೇ ಖಾಸಗಿ ಬದುಕನ್ನ ಈ ರೀತಿ ತೋರಿಸದನ್ನ ತಪ್ಪು ಅಂತಾರೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ದೂರುದಾರ ದಿನೇಶ್ ಕಲ್ಲಹಳ್ಳಿ ಹತ್ತೊಂಬೊತ್ತು ಸಿಡಿ ಇದ್ದಾವೆ ಅಂತಿದ್ದಾರೆ. ಅಷ್ಟು ಸಿಡಿ ಇವೆ ಅಂತ ಹೇಳಬೇಕಾದ್ರೆ ಈತನೇ ಚಿತ್ರೀಕರಣ ಮಾಡಿಸಿದ್ನಾ.? ಆ ಬಗ್ಗೆ ಸೂಕ್ತ ತನಿಖೆ ಆಗಿ, ಇದರ ಬಗ್ಗರ ಸೂಕ್ತ ಕ್ರಮ ತೆಗೆದುಕೊಳ್ಳದೇ ಹೋದರೆ ಕೀಳು ಮಟ್ಟದ ಸಂಸ್ಕೃತಿಗೆ ನಾವೇ ದಾರಿ ಮಾಡಿಕೊಟ್ಟ ಹಾಗೇ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು, ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಸಿಡಿಗಳ ಸರ್ಕಾರ ಅಸ್ತಿತ್ವದಲ್ಲಿದೆ : ಕಾಂಗ್ರೆಸ್ -Vishwanews24