ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24
ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24
ಬೆಳಗಾವಿ: ಕಳೆದ 25ಕ್ಕೂ ಹೆಚ್ಚು ದಿನಗಳಿಂದ ನನ್ನ ಅಕ್ಕನಿಗೆ ಎಷ್ಟು ಚಿತ್ರಹಿಂಸೆ ಮಾಡುತ್ತಿದ್ದಾರೆ ದೇವರಿಗೆ ಗೊತ್ತು. ಡಿ.ಕೆ. ಶಿವಕುಮಾರ್ ಹೇಳಿದ ಹಾಗೆ ಆಕೆ ಮಾಡುತ್ತಿದ್ದಾಳೆ. ಅವಳನ್ನು ರಕ್ಷಿಸಿ ಎಂದು ಸಿಡಿ ಯುವತಿಯ ಮನೆಯವರು ಹೇಳಿಕೆ ನೀಡಿದ್ದಾರೆ.
ನಗದಲ್ಲಿ ಸಿಡಿ ಸಂತ್ರಸ್ತ ಯುವತಿ ತಂದೆ-ತಾಯಿ, ಸಹೋದರರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರಕರಣ ಹೊರ ಬಂದಂತೆ ನಾವು ಆಕೆಯನ್ನು ಸಂಪರ್ಕಿಸಿದ್ದವು. ಆಕೆ ಅದೆಲ್ಲವೂ ಸುಳ್ಳು, ಗ್ರಾಫಿಕ್ಸ್ ಎಂಬುದಾಗಿಯೂ ತಿಳಿಸಿದ್ದಳು. ನಮ್ಮ ಮಗಳ ಮೇಲೆ ನಮಗೆ ನಂಬಿಕೆ ಇದೆ. ಆಕೆ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾಗಿ ಹೇಳಿದರು.
ಇದನ್ನೂ ಓದಿ : ಸಿಡಿ ಪ್ರಕರಣ : ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಆಗಲ್ಲ: ಪ್ರಹ್ಲಾದ್ ಜೋಶಿ -Vishwanews24
ನಮ್ಮ ಮಗಳಿಂದ ದಿನಕ್ಕೊಂದು ಹೇಳಿಕೆಯನ್ನು ಒತ್ತಾಯಪೂರ್ವಕವಾಗಿಯೇ ಕೊಡಿಸುತ್ತಿದ್ದಾರೆ. ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ಅವರನ್ನು ಆಕೆ ಭೇಟಿಯಾಗಿದ್ದಾಗಿಯೂ ಹೇಳಿದ್ದಾಳೆ. ಹಣ ಕೊಟ್ಟು ಗೋವಾ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಕೊಡಲಾಗಿದೆ. ಒತ್ತಡ, ಒತ್ತಾಯದೊಂದಿಗೆ ಆಕೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾಳೆ. ಆಕೆಯನ್ನು ನಾವು ಮಾತನಾಡಿಸೋದು ಬಿಟ್ಟಿಲ್ಲ. ಆಕೆ ನಮ್ಮ ಜೊತೆಗೆ ಇರಲು ಬಯಸಿದ್ರೇ ಬರಲಿ ಎಂದರು.
ಆಕೆ 25 ದಿನಗಳಿಂದ ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯದ ಸಿಎಂ, ನ್ಯಾಯಾಧೀಶರು, ಗೃಹ ಸಚಿವರು ಪರಿಗಣಿಸಬೇಕು. ಆಕೆಗೆ 3-4 ದಿನಗಳ ಕಾಲ ಸಮಯ ನೀಡಬೇಕು. ಕೌನ್ಸಲಿಂಗ್ ಮಾಡಿಸಬೇಕು ಎಂದರು.
ಡಿ ಕೆ ಶಿವಕುಮಾರ್ ಮತ್ತು ಸಿಡಿ ಗುಂಪು ಷಡ್ಯಂತ್ರ ನಡೆಸುತ್ತಿದೆ. ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ ಎಂದು ಯುವತಿ ಪೋಷಕರು ನೇರ ಆರೋಪ ಮಾಡಿದರು.
ನಾನು ನಿವೃತ್ತ ಸೈನಿಕನಿದ್ದೇನೆ. ನನ್ನ ಮಗಳಿಗೆ ನಾನು ಭದ್ರತೆ ನೀಡುತ್ತೇನೆ. ಅವಳು ಇಲ್ಲಿದೆ ಬರಲಿ ಎಂದು ಯುವತಿಯ ತಂದೆ ಹೇಳಿದರು.
