ನಮಗೆ ಯಾವುದೇ ಭಯವಿಲ್ಲ , ಮೋದಿಯನ್ನ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿ : ಮಲ್ಲಿಕಾರ್ಜುನ ಖರ್ಗೆ – Vishwanews24

Featured, ರಾಷ್ಟ್ರ ನ್ಯೂಸ್

ನಮಗೆ ಯಾವುದೇ ಭಯವಿಲ್ಲ , ಮೋದಿಯನ್ನ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿ : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ:  ಇಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜೊತೆಗೆ ತಮ್ಮ ಮುಂದಿನ ಗುರಿಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಣಾಳಿಕೆ ಬಿಡುಗಡೆಯ ಬಳಿಕ ಮಾತನಾಡಿದ ಅವರು, ವಿಪಕ್ಷ ನಾಯಕರನ್ನ ಜೈಲಿನಲ್ಲಿಟ್ಟು ಚುನಾವಣೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಖಾತೆಯನ್ನೇ ಸಂಪೂರ್ಣ ಮುಟ್ಟುಗೋಲು ಹಾಕಲಾಗಿದೆ. ಮಾಧ್ಯಮ ಸಂಸ್ಥೆಗಳನ್ನ ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಮೋದಿಯನ್ನ ತೆಗೆದು ಹಾಕುವುದೇ ನಮ್ಮ ಮುಂದಿರುವ ಗುರಿಯಾಗಿದೆ. ಯಾರಾದ್ರು ಭಯಪಡುತ್ತಿದ್ದಾರೆ ಎಂದರೆ ಅವರು ತಪ್ಪು ಮಾಡಿದ್ದಾರೆ ಅಂತ ಅರ್ಥ. ಆದರೆ ನಮಗೆ ಯಾವುದೇ ಭಯವಿಲ್ಲ ಎಂದರು.

2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ: ಪಂಚ ನ್ಯಾಯ ಮತ್ತು 25 ಗ್ಯಾರಂಟಿ ಘೋಷಣೆ – Vishwanews24

ನಮ್ಮ ನಾಯಕರನ್ನೇ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಚಾರ್ಸೋ ಪಾರ್ ಅಂತಿದ್ದಾರೆ. ಮೋದಿ ಜನರ ನಡುವೆ ಹೋಗಲು ಆಗಲ್ಲ. ನಮ್ಮ ರಾಹುಲ್ ಗಾಂಧಿ ಜನರ ಮಧ್ಯೆ ಹೋಗಿದ್ದಾರೆ. ಆದರೆ ಜನರ ಮಧ್ಯೆ ಹೋಗುವುದಕ್ಕೆ ಮೋದಿಗೆ ಭಯವಿದೆ ಎಂದು ವಾಗ್ದಾಳಿ ನಡೆಸಿದರು.

 

Leave a Reply