ನಮ್ಮ ನಾಯಕ ರಾಹುಲ್ ಗಾಂಧಿಯವರ ಆದರ್ಶ ಎಲ್ಲಾ ಯುವಕರಿಗೆ ಮಾರ್ಗದರ್ಶಿ ಆಗಬೇಕು : ಲಕ್ಷ್ಮಿ ಹೆಬ್ಬಾಳ್ಕರ್  – vishwanews24

Featured, ರಾಜ್ಯ ನ್ಯೂಸ್

ರಾಹುಲ್ ಗಾಂಧಿಯವರ ಕಷ್ಟ ಹಾಗೂ ತ್ಯಾಗ ಯುವಕರಿಗೆ ಮಾದರಿಯಾಗಬೇಕು : ಲಕ್ಷ್ಮಿ ಹೆಬ್ಬಾಳ್ಕರ್ 

ಬೆಳಗಾವಿ: ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಷ್ಟ ಹಾಗೂ ತ್ಯಾಗ ಯುವಕರಿಗೆ ಮಾದರಿಯಾಗಬೇಕು ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಯುವ ಕಾಂಗ್ರೆಸ್ ಪ್ರತಿಜ್ಞಾ ಸಮಾವೇಶದಲ್ಲಿ ಭಾಗಿಯಾಗಿ, ಮಾತನಾಡಿದ ಅವರು, ಮಾಜಿ ಪ್ರಧಾನಿ ಮಗ, ಮಾಜಿ ಪ್ರಧಾನಿಯವರ ಮೊಮ್ಮಗ ಆದರೂ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಗುಣಗಾನ ಮಾಡಿದರು.

ಪಹಲ್ಗಾಮ್​​ ನಲ್ಲಿ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎಂಬುದಕ್ಕೆ ಪುರಾವೆ ಏನಿದೆ  : ಪಿ ಚಿದಂಬರಂ – vishwanews24

ತೋರಿಕೆಗೆ ಮಾತ್ರ ದೇಶ ಭಕ್ತಿಯ ಹೆಸರಿನಲ್ಲಿ ಬಿಜೆಪಿ ಯುವಕರನ್ನು ವಂಚಿಸುವ ಕೆಲಸ ಮಾಡುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿಯವರ ಆದರ್ಶ ಎಲ್ಲಾ ಯುವಕರಿಗೆ ಮಾರ್ಗದರ್ಶಿ ಆಗಬೇಕು ಎಂದು ಹೇಳಿದರು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಹರಿಹಾಯ್ದ ಅವರು, ವಾಟ್ಸಾಪ್ ಯೂನಿವರ್ಸಿಟಿ, ‌ಫೇಸ್‌ಬುಕ್ ಯೂನಿವರ್ಸಿಟಿಯಿಂದ ತಪ್ಪು ಸಂದೇಶ ರವಾನೆ ಆಗ್ತಿದೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ಅವರ ಕಷ್ಟ ಹಾಗೂ ತ್ಯಾಗ ಯುವಕರಿಗೆ ಮಾದರಿಯಾಗಬೇಕು, ಅವರು ಭಾರತ್ ಜೋಡೋ ಯಾತ್ರೆ ಮಾಡಿದ್ದಾರೆಂದು ಶ್ಲಾಘಿಸಿದ್ರು. ತಾವು ಮಾಜಿ ಪ್ರಧಾನಿ ಮಗ, ಮಾಜಿ ಪ್ರಧಾನಿ ಮೊಮ್ಮಗ ಆಗಿದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಾರೆ ಅಂತ ಸಚಿನೆ ಶ್ಲಾಘಿಸಿದರು.

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ಡಾನ ವಿರುದ್ಧ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ – vishwanews24

Leave a Reply