ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ, ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ : ಡಿ.ಕೆ. ಶಿ – Vishwanews24

Featured, ರಾಜ್ಯ ನ್ಯೂಸ್

ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ, ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ : ಡಿ.ಕೆ. ಶಿ 

ಬೆಂಗಳೂರು: ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೆನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಬೆಂಗಳೂರಿನ ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಕಾವೇರಿ ನೀರು ಹೆಚ್ಚಾಗಿ ಬರ್ತಾ ಇದೆ. ಆದರೆ, ಹಾಹಾಕಾರ ಇಲ್ಲ ಅಂತ ನಾವು ಹೇಳ್ತಾ ಇಲ್ಲ ಎಂದರು.

ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಬಿಜೆಪಿ ನಾಯಕರ ನಡೆ ಸರಿಯಲ್ಲ : ಎಂ.ಬಿ.ಪಾಟೀಲ್ – Vishwanews24

ಇನ್ನು ನಮ್ಮ ಮನೆಯಲ್ಲೂ ಬೋರ್ ವೆಲ್ ನಲ್ಲಿ ನೀರು ಇಲ್ಲ. ಬೇರೆ ಕಡೆಯಿಂದ ನೀರು ತರಿಸುವ ಪ್ರಯತ್ನ ಮಾಡ್ತಾ ಇದ್ದೀವಿ. ಕಾರು ತೊಳೆಯಲು, ದನ ಕರು ತೊಳೆಯಲು ಬಳಸಬೇಡಿ ಅಂತ ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟೋಗಿತ್ತೋ ಅದನ್ನ ಸರಿ ಮಾಡ್ತಾ ಇದ್ದೀವಿ ಎಂದರು.

Leave a Reply