ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ : ಸಿದ್ದರಾಮಯ್ಯ -Vishwanews24
ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ : ಸಿದ್ದರಾಮಯ್ಯ -Vishwanews24
ಬೆಂಗಳೂರು: “ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ. ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿಕೊಡುವುದು ಒಳ್ಳೆಯದು” ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು @BJP4Karnataka ಹೊಸರಾಗದಲ್ಲಿ ಹೇಳುತ್ತಿದೆ.
ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿಕೊಡುವುದು ಒಳ್ಳೆಯದು.
1/4 https://t.co/y3tQ1sTzPu— Siddaramaiah (@siddaramaiah) February 5, 2021
5 ಕೋಟಿ ಕೊಟ್ಟರೆ ಪ್ರಧಾನಿ ಮೋದಿ ಹತ್ಯೆ ಮಾಡುತ್ತೇನೆ ಎಂದಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿ.. -Vishwanews24
“ನಮ್ಮ ಸರ್ಕಾರದ ಕೊನೆ ವರ್ಷ(2017-18) ಪಡೆದಿದ್ದ ಸಾಲ ಕೇವಲ ರೂ.35,000 ಕೋಟಿ. 2020-21ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಲ ರೂ.90,000 ಕೋಟಿ, ಅಂದರೆ 157% ಹೆಚ್ಚಳ. ಇದಕ್ಕೆ ಮುಖ್ಯ ಕಾರಣ ತೆರಿಗೆ ಪಾಲು ಮತ್ತು ಅನುದಾನದ ಮೊತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅನ್ಯಾಯ” ಎಂದು ಕಿಡಿಕಾರಿದ್ದಾರೆ.
“ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಗೆ ಬದ್ದವಾಗಿಯೇ ನಾನು ಆರು ಬಜೆಟ್ ಮಂಡಿಸಿದ್ದೆ. ಈ ಎಲ್ಲ ಬಜೆಟ್ ಗಳಲ್ಲಿ ಹಣಕಾಸು ಕೊರತೆ ಜಿಎಸ್ ಡಿಪಿಯ ಶೇಕಡಾ ಮೂರರ ಮಿತಿಯಲ್ಲಿತ್ತು. ಒಟ್ಟುಸಾಲ ಎಫ್ ಆರ್ ಬಿ ಎಂ ಕಾಯ್ದೆಗೆ ಅನುಗುಣವಾಗಿ ಜಿಎಸ್ ಡಿಪಿಯ ಶೇಕಡಾ 25ರ ಮಿತಿಯಲ್ಲಿತ್ತು” ಎಂದಿದ್ದಾರೆ.
“ಬಿಜೆಪಿ ಆಡಳಿತದಲ್ಲಿ ಒಟ್ಟು ಸಾಲ ಜಿಎಸ್ ಡಿಪಿಯ ಶೇಕಡಾ 33ರಷ್ಟಾಗಿದೆ. ಇದು ಎಫ್‌ಆರ್‌ಬಿಎಂ ಕಾಯ್ದೆಯ ಉಲ್ಲಂಘನೆ. ಇದರ ಜೊತೆಗೆ ಹಣಕಾಸು ಕೊರತೆ ಶೇಕಡಾ ಮೂರರಿಂದ ಐದಕ್ಕೇರಿದೆ. ಇದು ಆತಂಕಕಾರಿ ಬೆಳವಣಿಗೆ. ಮೊದಲು ಈ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿ, ಆ ಮೇಲೆ ನಮ್ಮ ಸರ್ಕಾರದ ತಪ್ಪು ಹುಡುಕಲು ಹೊರಡಿ” ಎಂದು ಹೇಳಿದ್ದಾರೆ
ಉಡುಪಿ :ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಲು ಟೆಂಡರ್ ಪ್ರಕ್ರಿಯೆ -Vishwanews24
