ನರೇಂದ್ರ ಮೋದಿಯವರ ಮನ್ ಕಿ ಬಾಥ್ ಕೇಳುತ್ತಾ ಹಸೆಮಣೆ ಏರಿದ ವಧುವರ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮಧುವೆ ಎಂದರೆ ಅಲ್ಲಿ ನಾದಸ್ವರ, ತಾಳ ಮೇಳಗಳು, ಮಂಗಲ ವಾದ್ಯಗಳು, ಮಂತ್ರ ಘೋಷಗಳು ಮೊಳಗುತ್ತಿದ್ದಂತೆ ವರ ವಧುವಿನ ಕೊರಳಿಗೆ ಮಾಂಗಲ್ಯವನ್ನು ಕಟ್ಟುವುದು ಸಹಜ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಲಿಸುತ್ತಾ ವರ ವಧುವಿಗೆ ತಾಳಿ ಕಟ್ಟಿ ಹಸೆಮಣೆ ಏರಿದ ವಿಶೇಷ ಮಧುವೆ ಸುಳ್ಯದಲ್ಲಿ ನಡೆದಿದೆ.

ಬಿಜೆಪಿ ಕಾರ್ಯಕರ್ತ ಹಾಗೂ ಮೋದಿಯ ಅಭಿಮಾನಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಗುಡ್ಡಪ್ಪಗೌಡ-ಲಕ್ಷ್ಮಿ ದಂಪತಿಗಳ ಪುತ್ರ ಪಿ.ಜಿ.ಜಯರಾಮ ಮತ್ತು ಮರ್ಕಂಜ ಗ್ರಾಮದ ಕುದ್ಕುಳಿ ಚೀಮಾಡ್ ಕೇಪಣ್ಣ ಗೌಡ-ಕಮಲ ದಂಪತಿಗಳ ಪುತ್ರಿ ದಮಯಂತಿಯ ವಿವಾಹ ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಭಾನುವಾರ ನಡೆಯಿತು. 11.25ಕ್ಕೆ ವಿವಾಹ ಮುಹೂರ್ತ ಫಿಕ್ಸ್ ಆಗಿತ್ತು. ಇದೇ ಸಂದರ್ಭದಲ್ಲಿ ಆಕಾಶವಾಣಿಯ ಮೂಲಕ ಮೋದಿಯವರ 53ನೇ ಮನ್ ಕಿ ಬಾತ್ ಪ್ರಸಾರವಾಗುತ್ತಿತ್ತು. ಆದುದರಿಂದಲೇ ಮದುವೆಗೆ ಮಂತ್ರ ಘೋಷಗಳ ಬದಲು ಮೋದಿಯವರ ಮನದ ಮಾತು ಮದುವೆಗೆ ಹಿನ್ನೆಲೆಯಾಯಿತು.

ಇವರು ಮೋದಿ ಮನದ ಮಾತನ್ನು ಆಲಿಸುತ್ತಲೇ ಸಪ್ತಪದಿ ತುಳಿದರು. ಮೋದಿಯ ಭಾವಪೂರ್ಣ ಮನದ ಮಾತು ಆಲಿಸುತ್ತಲೇ ನೆರೆದ ಬಂಧು ಮಿತ್ರರು ಮದುವೆಗೆ ಸಾಕ್ಷಿಗಳಾದರು.