ಮಂಗಳೂರು : ಕರಾವಳಿಯ ನೆಚ್ಚಿನ ಜಾನಪದ ಕ್ರಿಡೆ ಕಂಬಳದ ಋತು ಈ ಬಾರಿ ಮತ್ತೆ ಮುಂದೂಡಿಕೆಯಾಗಿದ್ದು, ಇದೇ ವಾರ ಶಿರ್ವದಲ್ಲಿ ಜೋಡುಕರೆ ಕಂಬಳ ವಿಧ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು. ವೇಳಾಪಟ್ಟಿ ಮತ್ತೆ ಬದಲಾವಣೆ ಕಂಡಿದ್ದು, ನವೆಂಬರ್ 26ರಂದು ಕಕ್ಯಪದವು ಸತ್ಯಧರ್ಮ ಜೋಡುಕರೆ ಕಂಬಳದೊಂದಿಗೆ ಈ ಸಾಲಿನ ಕಂಬಳಗಳಿಗೆ ಚಾಲನೆ ದೊರಕಲಿದೆ.
ಈ ಋತುವಿನ ಮೊದಲ ಮೂರು ಕಂಬಳಗಳಾದ ನವೆಂಬರ್ 5- ಶಿರ್ವ, ನವೆಂಬರ್ 12- ಪಿಲಿಕುಳ, ನವೆಂಬರ್ 19- ಪಜೀರು ಮುಂದೂಡಲ್ಪಟ್ಟಿರುವುದರಿಂದ ಕಂಬಳ ಆರಂಭ ಮೂರು ವಾರ ವಿಳಂಬವಾಗಲಿದೆ. ಇದರೊಂದಿಗೆ ಒಟ್ಟು ಕಂಬಳಗಳ ಸಂಖ್ಯೆ 24ರಿಂದ 21ಕ್ಕೆ ಇಳಿಕೆಯಾಗಲಿದೆ. ಸಾಂಪ್ರದಾಯಿಕ ಕಂಬಳವಾಗಿರುವ ಶಿರ್ವ ಕಂಬಳ ಹಗಲು ಮಾತ್ರ ನಡೆಯುತ್ತದೆ. ಈ ಬಾರಿ ಗದ್ದೆಯಲ್ಲಿ ಭತ್ತ ನಾಟಿ ವಿಳಂಬವಾಗಿ, ಮಳೆಯ ನಡುವೆ ಕಟಾವು ಇನ್ನಷ್ಟೇ ನಡೆಯಬೇಕಿರುವುದರಿಂದ ಶಿರ್ವ ಕಂಬಳವನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಡಿಸೆಂಬರ್ 13ರಂದು ಮಂಗಳವಾರ ನಡೆಯಲಿದೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ..
ನವೆಂಬರ್ 19ರಂದು ನಿಗದಿಯಾಗಿದ್ದ ಪಜೀರು ಕಂಬಳ ಕರೆಗೆ ಮೊನ್ನೆಯಷ್ಟೇ ಶಿಲಾನ್ಯಾಸ ನಡೆದಿದೆ. ಕರೆ ಇನ್ನಷ್ಟೇ ಸಿದ್ಧವಾಗಬೇಕಿರುವುದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಕಂಬಳ ಸಮಿತಿಯು ಪಿಲಿಕುಳ ಕಂಬಳಕ್ಕೆ ನ.12ರ ದಿನಾಂಕ ನೀಡಿತ್ತು. ಆದರೆ ಕರೆ ಸಿದ್ಧತೆ ಕೆಲಸವೇ ಆರಂಭಗೊಂಡಿಲ್ಲ. ಈ ನಡುವೆ, ‘ಈ ಬಾರಿ ಕಂಬಳ ಮಾಡೋಣ’ ಎಂದು ಆಸಕ್ತಿ ತೋರಿಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವರ್ಗಾವಣೆಗೊಂಡಿದ್ದಾರೆ. ಹೊಸ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇನ್ನಷ್ಟೇ ಅಧಿಕಾರ ವಹಿಸಿಕೊಳ್ಳಬೇಕಿದೆ. ಹೀಗಾಗಿ ಪಿಲಿಕುಳದಲ್ಲಿ ಈ ಬಾರಿಯೂ ಕಂಬಳ ನಡೆಯುವ ಸಾಧ್ಯತೆ ಗೋಚರಿಸುತ್ತಿಲ್ಲ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…