ನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ  ಸ್ಯಾಂಡಲ್ ವುಡ್ ನಟರು  – Vishwanews24

Featured, ರಾಜ್ಯ ನ್ಯೂಸ್

ನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ  ಸ್ಯಾಂಡಲ್ ವುಡ್ ನಟರು  – Vishwanews24

ಬೆಂಗಳೂರು: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವ ಘಟನೆಯನ್ನು ನಟರಾದ ಶಿವರಾಜ್‌ಕುಮಾರ್‌ ಹಾಗೂ ದರ್ಶನ್‌ ಅವರು ಖಂಡಿಸಿದ್ದು, ‘ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು’ ಎಂದು ಆಗ್ರಹಿಸಿದ್ದಾರೆ.
‘ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ’ ಎಂದು ಶಿವರಾಜ್‌ಕುಮಾರ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ. ಜೊತೆಗೆ ವರನಟ ಡಾ.ರಾಜ್‌ಕುಮಾರ್‌ ಅವರು ಕನ್ನಡ ಪರ ಹೋರಾಟ ಮಾಡಿದ ಸಂದರ್ಭದ ಫೋಟೊವೊಂದನ್ನು ಶಿವರಾಜ್‌ಕುಮಾರ್‌ ಅಪ್‌ಲೋಡ್‌ ಮಾಡಿದ್ದಾರೆ.

 

‘ಕನ್ನಡ ಹೋರಾಟಗಾರರನ್ನ ಬಿಡುಗಡೆಗೊಳಿಸಿ’ ಎಂಬ ಹ್ಯಾಷ್‌ಟ್ಯಾಗ್‌ ಅಭಿಯಾನವನ್ನೂ ಶಿವರಾಜ್‌ಕುಮಾರ್‌ ಆರಂಭಿಸಿದ್ದಾರೆ.

ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24

May be an image of 9 people, people standing, fire, outdoors and text that says "Duniya Vijay 1h ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ. Like Comment Share"

May be a Twitter screenshot of standing and text that says "Rishab Shetty @shetty_rishab ನಮ್ಮ ಕರುನಾಡ ಧ್ವಜ ಸುಟ್ಟು, ಕನ್ನಡ ತಾಯಿ, ತಾಯ್ನಾಡಿಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು. ಕನ್ನಡಪರ ಹೋರಟಗಾರರನ್ನು ಬಿಡುಗಡೆ ಮಾಡಬೇಕಾಗಿ ವಿನಂತಿ @CMofKarnataka Translate Tweet"

ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ : ಸಿದ್ಧರಾಮಯ್ಯ ಗೆ ಬಿಜೆಪಿ ತಿರುಗೇಟು – Vishwanews24