ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ‘ಫಿಟ್ ಇಂಡಿಯಾ ಅಭಿಯಾನಕ್ಕೆ’ ಕ್ಕೆ ಚಾಲನೆ ನೀಡಿದರು.
ಸ್ವಾರ್ಥದಿಂದ ಸ್ವಾಸ್ಥದ ಎಡೆಗೆ ಭಾರತವನ್ನು ಕೊಂಡೊಯ್ಯುವ ನಿಟ್ಟಿನಿಂದ ಈ ಅಭಿಯಾನ ಪ್ರಾರಂಭ ಮಾಡಲಾಗಿದೆ ಎಂದು ಮೋದಿ ಹೇಳಿದರು. ಪ್ಲಾಸ್ಟಿಕ್ ಬಳಕೆ ಬಗ್ಗೆ ಮತ್ತೊಮ್ಮೆ ಪ್ರಧಾನಿ ಮೋದಿ ಮನ್ ಕೀ ಬಾತ್ ಫಿಟ್ ಇಂಡಿಯಾ ಅಭಿಯಾನದ ಈ ದಿನ ಆರೋಗ್ಯ ಮಾತ್ರವಲ್ಲದೆ, ದೇಶದ ಬಾವುಟವನ್ನು ವಿಶ್ವದೆಲ್ಲೆಡೆ ಹಾರಿಸಿದ ಕ್ರೀಡಾಪಟುಗಳಿಗೆ ಅಭಿನಂದಿಸುವ ದಿನವೂ ಆಗಿದೆ ಎಂದು ಅವರು ಹೇಳಿದರು.
ಫಿಟ್ ಇಂಡಿಯಾ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಲ್ಲ ಇದು ಜನರ ಕಾರ್ಯಕ್ರಮ, ಇದು ಭಾರತದ ಎಲ್ಲ ಕುಟುಂಬಗಳ ಕಾರ್ಯಕ್ರಮ ಆಗಬೇಕು ಸರ್ಕಾರ ಕೇವಲ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು. ಈ ಆಂದೋಲನವನ್ನು ಸರ್ಕಾರ ಶುರು ಮಾಡಿದೆ ಆದರೆ ಇದನ್ನು ಜನರೇ ಮುಂದುವರೆಸಬೇಕು ಎಂದರು.
ಫಿಟ್ ಇಂಡಿಯಾ ಆಂದೋಲವನ್ನು ನಿಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ, ಇದರಲ್ಲಿ ಬಂಡವಾಳ ಇಲ್ಲ ಆದರೆ ಲಾಭ ಮಾತ್ರ ಅಸೀಮವಾಗಿದೆ. ವ್ಯಕ್ತಿ, ಕುಟುಂಬ, ಸಮಾಜ ದೇಶ ಎಲ್ಲವೂ ಆರೋಗ್ಯವಂತವಾಗಿರುತ್ತದೆ.
‘ನಾನು ಫಿಟ್ ನನ್ನ ದೇಶ ಫಿಟ್’ ಎಂಬ ಘೋಷಣೆಯನ್ನೂ ಮೋದಿ ನೀಡಿದರು. ತಂತ್ರಜ್ಞಾನದಿಂದ ನಾವು ನಡೆಯುವುದು, ಓಡುವುದು ಬಿಟ್ಟುಬಿಟ್ಟಿದ್ದೀವಿ. ಆದರೆ ಇಂದು ಅದೇ ತಂತ್ರಜ್ಞಾನ ನೀವು ದಿನಕ್ಕೆ ಎಷ್ಟು ಹೆಜ್ಜೆ ಇಟ್ಟಿರೆಂದು ಲೆಕ್ಕ ಮಾಡಿ ಹೇಳುತ್ತಿದೆ ಎಂದು ಫಿಟ್‌ನೆಸ್ ಆಪ್‌ಗಳ ಬಗ್ಗೆ ಮೋದಿ ಹೇಳಿದರು.
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ .. ಜೈಲಿನಲ್ಲಿನ ಕೆಲವು ಅಧಿಕಾರಿಗಳು ತಮ್ಮ ಹಳೆಯ ಚಾಳಿ…
ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…
ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಹೊಂದಿರುವ…
ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…