ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ: ನಟ ಪ್ರಕಾಶ್​ ರಾಜ್​ – Vishwanews24

Featured, ರಾಜ್ಯ ನ್ಯೂಸ್

ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ: ನಟ ಪ್ರಕಾಶ್​ ರಾಜ್​

ಕಲಬುರಗಿ: ನಾನು ಯಾವುದೇ ಧರ್ಮ ವಿರೋಧಿ ಅಲ್ಲ, ಜನರನ್ನು ಪ್ರೀತಿಸುವ ಮನುಷ್ಯ. ನಾವು ಯಾವುದೇ ಧರ್ಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಹುಭಾಷಾ ನಟ, ಚಿಂತಕ ಪ್ರಕಾಶ್​ ರಾಜ್​ ಹೇಳಿದ್ದಾರೆ.

ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಾಶ್ ರಾಜ್ ಆಗಮಿಸಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್​ ರಾಜ್​ ರಾಜಕಾರಣಿಗಳು ಏನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಕಾರ್ಕಳ: ಪರಶುರಾಮ ಥೀಮ್‌ ಪಾರ್ಕಿನಲ್ಲಿ ವ್ಯತ್ಯಾಸ ಆಗಿದ್ದರೆ ತನಿಖೆ ಮಾಡಲಿ, ನಾನು ಬೆಂಬಲ ನೀಡುತ್ತೇನೆ : ಸುನಿಲ್‌ ಕುಮಾರ್‌ – Vishwanews24

ಈ ಕುರಿತು ಮಾತನಾಡಿದ ಪ್ರಕಾಶ್​ ರಾಜ್​ ನಾನು ಯಾವುದೇ ಧರ್ಮ ವಿರೋಧಿ ಅಲ್ಲ. ನಾವು ಯಾವುದೇ ಧರ್ಮದ ಬಗ್ಗ ಮಾತನಾಡುತ್ತಿಲ್ಲ. ನಾನು ಜನರನ್ನು ಪ್ರೀತಿಸುವ ಮನುಷ್ಯ. ರಾಜಕಾರಣಿಗಳು ಏನಾದರೂ ಧರ್ಮವನ್ನು ಗುತ್ತಿಗೆ ಪಡೆದಿದ್ದಾರತಾ, ರೋಗ ಅವರಿಗೆ ಬಂದಿರುವುದು ನನಗಲ್ಲ ಎಂದಿದ್ದಾರೆ.

Leave a Reply