ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ : ಪತ್ರ ಬರೆದು ವಿದ್ಯಾರ್ಥಿ ನಾಪತ್ತೆ – vishwanews24

Featured, ರಾಜ್ಯ ನ್ಯೂಸ್

ಅಧರ್ಮದ ಜಗತ್ತನ್ನು ತೊರೆದು, ಸತ್ಯದ ಕಡೆ ಹೋಗುತ್ತಿದ್ದೇನೆ : ಪತ್ರ ಬರೆದು ವಿದ್ಯಾರ್ಥಿ ನಾಪತ್ತೆ

ಬೆಂಗಳೂರು: ಅಧರ್ಮದ ಜಗತ್ತನ್ನ ತೊರೆದು ಸತ್ಯದ ಕಡೆ ಹೋಗುತ್ತಿದ್ದೇನೆ, ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಬರೆದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ.

ಮೋಹಿತ್ ಋಷಿ ನಾಪತ್ತೆಯಾದ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ.

ಮೈಕ್ರೋ ಫೈನಾನ್ಸ್  ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ : ಗೃಹ ಸಚಿವ ಪರಮೇಶ್ವರ್ – vishwanews24

ಜನವರಿ 16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಪುಸ್ತಕದಲ್ಲಿ ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ ಎಂದು ಬರೆದಿದ್ದಾನೆ.

ನಾನು ವಿಷ್ಣುವಿನ ಮಗ, ಸತ್ಯ ಹುಡುಕಲು ಹೋಗುತ್ತಿದ್ದೇನೆ" ಪತ್ರ ಬರೆದಿಟ್ಟು ಬಾಲಕ ನಾಪತ್ತೆ  - Kannada News | Bengaluru Boy Missing: 17 Year Old Leaves note About  Seeking Truth, Kannada News | TV9 Kannada

ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ಸದ್ಯ ಉತ್ತರ ಪ್ರದೇಶದ ಪ್ರಯಾಜ್ ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಮೋಹಿತ್ ಪ್ರಯಾಗ್ ರಾಜ್‌ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ಮಾಡಿ ಹುಡುಕಾಡುತ್ತಿರುವ ಪೊಲೀಸರು, ಮೋಹಿತ್ ಪ್ರಯಾಗ್‌ರಾಜ್‌ಗೆ ಹೋಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿಯ ಪೋಷಕರು ಸೋಷಿಯಲ್ ಮೀಡಿಯಾದಲ್ಲಿಯೂ ಫೋಟೋ ಹಾಕಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಉಡುಪಿ: ಸಂಜೀವಿನಿ ಸ್ವ-ಸಹಾಯ ಸಂಘಗಳಿಗೆ 51 ಕೋಟಿ ರೂ. ಶೂನ್ಯ ಬಡ್ಡಿ ಸಾಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

Leave a Reply