ಉಡುಪಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ ಬಾವುಟ ಇರಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ ಪಕ್ಷಕ್ಕೆ ನಾನು ದೇವರಾಣೆಗೂ ಹೋಗುವುದಿಲ್ಲ. ನನ್ನ ಜೊತೆ ಜನ ಇದ್ದಾರೆ ಎಂದ ತಕ್ಷಣ ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಕರೆ ಬಂದಿದೆ, ಆದರೆ ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ರಘುಪತಿ ಭಟ್ರು ಬಿಜೆಪಿ. ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು. ನಾನು ಪಕ್ಷೇತರ ನಿಲ್ಲುತ್ತೇನೆ, ನಿಲ್ಲುವುದಿಲ್ಲ ಎಂದು ಹೇಳಲು ನಾನಿನ್ನು ನಿರ್ಧಾರವೇ ಮಾಡಿಲ್ಲ. ನಾನು ಇನ್ನು ಶಾಕ್‌ನಿಂದ ಹೊರಗೆ ಬಂದಿಲ್ಲ ಎಂದು ಹೇಳಿದರು.
ಯಾವುದೇ ನಿರ್ಧಾರವಾದರೂ ನಾನೇ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಮಾತ್ರ ಪಡೆಯುತ್ತೇನೆ. ನಾನು ಸಭೆ ಸೇರಿಸುತ್ತೇನೆ. ಪಕ್ಷೇತರ ನಿಲ್ಲುತ್ತೇನೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ನನ್ನ ನಿರ್ಧಾರವನ್ನು ನಾನೇ ಮಾಡುತ್ತೇನೆ. ನಾನು ರಾಜಕೀಯದಿಂದ ದೂರ ಹೋಗುವ ವ್ಯಕ್ತಿಯ ಅಲ್ಲ. ಕಾರ್ಯಕರ್ತರ ಎಲ್ಲ ಕಷ್ಟಗಳಿಗೆ ಜೊತೆಯಾಗಿ ನಿಲ್ಲುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಿರಿಯ ಮುಖಂಡರ ಬಗ್ಗೆ ನನಗೆ ಅತೀವವಾದ ಗೌರವವಿದೆ. 15 ವರ್ಷ ಶಾಸಕನಾಗಿದ್ದು ನಾನು ಬೇಡದವನಾಗಿ ಹೋದ್ನಾ?. ನಾನು ಟಿವಿಯಲ್ಲಿ ವಿಚಾರವನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಒಂದು ಫೋನ್ ಕರೆ ಮಾಡಿ ಈ ಕಾರಣಕ್ಕೋಸ್ಕರ ನಿನಗೆ ಟಿಕೆಟ್ ಇಲ್ಲ ಎಂದು ಯಾರೂ ಹೇಳಿಲ್ಲ. ಮುನ್ಸೂಚನೆ ಕೊಟ್ಟಿದ್ರೆ ಈಶ್ವರಪ್ಪ ರೀತಿಯಲ್ಲಿ ರಾಜೀನಾಮೆ ನೀಡುತ್ತಿದ್ದೆ. ನಾನು ವಿಮರ್ಷೆ ಮಾಡಲ್ಲ, ನಿರ್ಧಾರ ಮಾಡಿದವರು ನನಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್ ವಿತರಣೆ ಮಂಗಳೂರು: ತಡೆಗೋಡೆ…
ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…
ಬೆಳಗಾವಿ : ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಜು.6 ಕ್ಕೆ ಬೆಳಗಾವಿಗೆ…
ಸಪ್ತಪದಿ ಸೇರಿ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ಹಿಂದೂ ವಿವಾಹ ಮಾನ್ಯ: ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ಅಹಮದಾಬಾದ್: ಕೇವಲ…
ಪಾನ್ ಮಸಾಲಾ, ಗುಟ್ಕಾ ಮಾರಾಟ ಬ್ಯಾನ್ ಎಚ್ಚರಿಕೆ ನೀಡಿದ್ದ ಸಿಎಂ: ರಾಜ್ಯದಲ್ಲಿ 32 ಪಾನ್ ಮಸಾಲಾ ಮಾದರಿ ಸಂಗ್ರಹ ಬೆಂಗಳೂರು:…
ರಾಮನಗರ : ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ ರಾಮನಗರ: ರಾಮನಗರ ಜಿಲ್ಲೆಯ ಬೆಂಗಳೂರು…