ಉಡುಪಿ: ಅಪ್ಪ ಅಮ್ಮನ ಜೊತೆ ಹೋಗಿ ನಾನೂ ವೋಟ್ ಹಾಕುತ್ತೇನೆ ಅಂತಾ ನಿಟ್ಟೂರಿನ 3 ವರ್ಷದ ಪೋರ ಹಠ ಹಿಡಿದು, ಕೊನೆಗೆ ಅತ್ತು ಕರೆದು ಕೈಗೆ ಇಂಕ್ ಹಾಕಿಸಿಕೊಂಡಿದ್ದಾನೆ.
ಹಾಲುಗಲ್ಲದ ಹಸುಳೆ ರಿಹಾಂಶ್‍ಗೆ ಈಗ ಮೂರರ ಹರೆಯ. ಇವನು ಉಡುಪಿ ಶಾಸಕ ರಘುಪತಿ ಭಟ್ಟರ ಮಗ. ಅಪ್ಪ ಅಮ್ಮನ ಜೊತೆಗೆ ಮತಗಟ್ಟೆಗೆ ಬಂದ, ಅವರು ಮತದಾನ ಮಾಡಲು ಹೋಗುತ್ತಿದ್ದಂತೆ ನಾನೂ ವೋಟ್ ಹಾಕುತ್ತೇನೆ ಅಂತಾ ಹಠ ಮಾಡಿ, ಅಳಲಾರಂಭಿಸಿದ್ದಾನೆ. ಶಾಸಕರ ಕಾರು ಚಾಲಕ ವಿಜಯ್, ಅಧಿಕಾರಿಗಳ ಬಳಿಗೆ ರಿಹಾಂಶ್‍ನನ್ನು ಕರದೊಯ್ದರು. ಮತಗಟ್ಟೆಯ ಹೊರಗೆ ಕುಳಿತ್ತಿದ್ದ ಅಧಿಕಾರಿಗಳು ಪೆನ್ನಿನಿಂದ ರಿಹಾಂಶ್ ಎಡಗೈ ತೋರ್ಬೆರಳಿಗೆ ಶಾಹಿಮುದ್ರೆ ಹಾಕಿಸಿದ್ದಾರೆ. ಆಗ ಆತನು ಅಳುವುದನ್ನು ನಿಲ್ಲಿಸಿದ್ದಾನೆ.
ಗಮ್ಮತ್ತು ಏನಂದರೆ ಶಾಹಿ ಹಾಕ್ಕೊಂಡು ಬಂದವನೇ ವಿಕ್ಟರಿ ಸಿಂಬಲ್ ತೋರಿಸುತ್ತಾನೆ. ಮೋದಿ ಗೆಲ್ತಾರೆ ಅಂತಾನೆ. ನಾಳೆ ಪೇಪರಲ್ಲಿ ಫೋಟೋ ಹಾಕಿ ಅಂತಾ ಮಾಧ್ಯಮದವರಿಗೆ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್, ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಚುನಾವಣೆಯದ್ದೇ ವಾತಾವರಣ. ಹಾಗಾಗಿ ವೋಟ್ ಹಾಕುತ್ತೇನೆ ಅಂತಾ ಹಠ ಮಾಡುತ್ತಿದ್ದ. ಆತ ಕೂಡ ನಮ್ಮಂತೆ ಮೋದಿ ಅಭಿಮಾನಿ ಅಂತಾ ಹೇಳಿದರು.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…