ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ 14 ವರ್ಷದ ಬಾಲಕ ʻರೇಬೀಸ್ʼನಿಂದ ಸಾವು – Vishwanews24
ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ 14 ವರ್ಷದ ಬಾಲಕ ʻರೇಬೀಸ್ʼನಿಂದ ಸಾವು
ಗಾಜಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಂದ ಮುಚ್ಚಿಟ್ಟ 14 ವರ್ಷದ ಬಾಲಕ ರೇಬಿಸ್‍ನಿಂದ ಮೃತಪಟ್ಟಿರುವ ಘಟನೆ ನಡೆದಿದೆ.
8ನೇ ತರಗತಿಯ ವಿದ್ಯಾರ್ಥಿ ಶಹವಾಜ್ ಮೃತ ಬಾಲಕ.
ಶಹವಾಜ್ ಅವರ ಆರೋಗ್ಯ ಹದಗೆಟ್ಟ ಪರಿಣಾಮ ಸೋಮವಾರ ಸಂಜೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‍ಶಹರ್‍ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಮೃತಪಟ್ಟಿದ್ದಾನೆ.
ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣ ಈತನ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಯಿತು. ಅಲ್ಲದೆ ಸೆಪ್ಟೆಂಬರ್ 1 ರಿಂದ ಊಟ ಮಾಡುವುದುನ್ನು ಕೂಡ ನಿಲ್ಲಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ ಎನ್ನಲಾಗಿದೆ.
ಉಡುಪಿ : ಈ ಬಾರಿ ಸೀ ಫೋಕ್ (Sea Folk) ಮತ್ತೊಂದು ವಿಭಿನ್ನ ವೇಷದಲ್ಲಿ ರವಿ ಕಟಪಾಡಿ – Vishwanews24
ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕಳೆದ ವಾರ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿರುವುದಾಗಿ ಪೊಲೀಸರ ಬಳಿ ಪೋಷಕರು ತಿಳಿಸಿದ್ದಾರೆ.
ಅಂಬುಲೆನ್ಸ್‍ನಲ್ಲಿ ಗಾಜಿಯಾಬಾದ್‍ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ನಾಯಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯದ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.
