ದುಬೈ: ಕೋವಿಡ್ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ನಾಳೆಯಿಂದ ದುಬೈನಲ್ಲಿ ಪುನಾರಂಭವಾಗಲಿದ್ದು, 8 ತಂಡಗಳು ಸಹ ಅಭ್ಯಾಸದಲ್ಲಿ ನಿರತವಾಗಿದೆ.
ಕೊರೋನಾ ಕಾರಣದಿಂದ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಈಗ ಮತ್ತೆ ಐಪಿಎಲ್ ಆರಂಭವಾಗುತ್ತಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಬಲಿಷ್ಟ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿವೆ.
ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 8 ಪಂದ್ಯಗಳನ್ನಾಡಿ 6 ಜಯ ಹಾಗೂ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 5 ಜಯ ಹಾಗೂ 2 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮೂರನೇ ಸ್ಥಾನ ಅಲಂಕರಿಸಿದೆ.
ಚುಟುಕು ಕ್ರಿಕೆಟ್‍ನ ಹೊಡಿಬಡಿ ಆಟದಲ್ಲಿ ಈ ಬಾರಿಯ ಐಪಿಎಲ್ ಕೀರಿಟ ಯಾವ ತಂಡದ ಪಾಲಾಗಲಿದೆ ಕಾದುನೋಡಬೇಕಿದೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…
ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…
ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…
ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…