ನಾಳೆ (ಬುಧವಾರ) ಕಾಪು ಬೀಚ್ ನಲ್ಲಿ ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಶ್ರೀಶ ನಾಯಕ್ ನೇತೃತ್ವದಲ್ಲಿಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ :vishwanews24

Featured, ರಾಜ್ಯ ನ್ಯೂಸ್

ನಾಳೆ (ಬುಧವಾರ) ಕಾಪು ಬೀಚ್ ನಲ್ಲಿ ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಶ್ರೀಶ

ನಾಯಕ್ ನೇತೃತ್ವದಲ್ಲಿಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ :vishwanews24

ಗೆದ್ದವರಿಗೆ ನಗದು ಬಹುಮಾನ-

ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

ಉಡುಪಿ: ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಪೆರ್ಣಂಕಿಲ ಶ್ರೀಶ ನಾಯಕ್ ನೇತೃತ್ವದಲ್ಲಿ ಕಾಪು ಬೀಚ್ ನಲ್ಲಿ ಅಕ್ಟೋಬರ್ 26ರಂದು ಬುಧವಾರ ಸಂಜೆ 4 ಗಂಟೆಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದೆ.

ಐದು ನೂರಕ್ಕೂ ಅಧಿಕ ಗೂಡು ದೀಪಗಳು ಸ್ಪರ್ಧೆಯಲ್ಲಿ ಕಾಣಸಿಗುವ ನಿರೀಕ್ಷೆಗಳಿದ್ದು ಅಂತರ್ ಜಿಲ್ಲೆಯಿಂದ ಕೂಡ ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆಗಳಿದೆ.ಸ್ಪರ್ಧೆಯಲ್ಲಿ ಮೂಲೆಗಳಿರುವ ಗೂಡುದೀಪ ಕಡ್ಡಾಯವಾಗಿದ್ದು, ಬಣ್ಣದ ಕಾಗದ, ಗ್ಲಾಸ್ ಪೇಪರ್, ಅಥವಾ ಬೆಗಡೆ ಉಪಯೋಗಿಸಿರಬೇಕು.

ಪ್ಲಾಸ್ಟಿಕ್, ಫ್ಲೆಕ್ಸ್, ಫೈಬರ್, ಥರ್ಮಾಕೋಲ್, ಹೂವು ಮರ, ಗ್ಲಾಸ್ ಇತ್ಯಾದಿಗಳನ್ನು ಉಪಯೋಗಿಸಿದರೆ ಸ್ಪರ್ಧೆಯಲ್ಲಿ ಪರಿಗಣಿಸುವುದಿಲ್ಲ. ಗೂಡುದೀಪಕ್ಕೆ ಬಾಲ ಇರಲೇಬೇಕು. ಸ್ಪರ್ಧೆಗೆ ವಯೋಮಿತಿ ಪರಿಗಣಿಸುವುದಿಲ್ಲ ಮತ್ತು ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದೆ.

ವಿಜೇತರಿಗೆ ಪ್ರಥಮ ಬಹುಮಾನ ರೂ 11111, ದ್ವಿತೀಯ ರೂ 7777 ಮತ್ತು ತೃತೀಯ ಬಹುಮಾನ ರೂ 5555 ಇರಲಿದೆ

ಕಾರ್ಯಕ್ರಮದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ 9886619748 (ಪ್ರವೀಣ್ ಪೂಜಾರಿ), 9008169918 (ಸಂತೋಷ್ ಕುಮಾರ್) ಸಂಪರ್ಕಿಸಬಹುದು .

Leave a Reply