ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿದ್ದೇವೆ : ಪ್ರಜ್ವಲ್ ರೇವಣ್ಣ – Vishwanews24
ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿದ್ದೇವೆ..
ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳಲು ಹೊರಟರೆ ತುಂಬಾ ಸಮಯ ಹಿಡಿಯುತ್ತೆ..
ಬಿಜೆಪಿಗೆ ಬೈದ್ರೆ ನಾವು ದೇಶ ವಿರೋಧಿಗಳು, ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ನಾವು ಕೋಮುವಾದಿಗಳು..
ಕಮಲ ಪಕ್ಷ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ..
ವಿಜಯಪುರ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳಲು ಹೊರಟರೆ ತುಂಬಾ ಸಮಯ ಹಿಡಿಯುತ್ತೆ ಎಂದು ಹೇಳುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಅವರು ಕಮಲ ಪಕ್ಷ ವಿರುದ್ಧ ಸಿಡಿದೆದ್ದಿದ್ದಾರೆ.
ಸಿಂದಗಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಹೆಚ್.ಡಿ ಕುಮಾರಸ್ವಾಮಿ ದ್ಚಿಪತ್ನಿತ್ವದ ಬಗ್ಗೆ ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯಿಸಿ ಎಚ್ಚರಿಕೆ ನೀಡಿದರು. ಭಾರತೀಯ ಜನತಾ ಪಕ್ಷದವರು ಯಾರು ಯಾರ ಜೊತೆಗಿದ್ದರು. ಯಾರ ಜೊತೆಯಿದ್ದು ಎದ್ದು ಬಂದ್ರು ಅನ್ನೋದನ್ನು ಹೇಳ ಹೊರಟರೇ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ವಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಕೆಲಸದ ಮೇಲೆ ಬಿಜೆಪಿ ಮತ ಕೇಳಲಿ ಎಂದು ವಾಗ್ದಾಳಿ ನಡೆಸಿದರು.
ಎರಡು ಪಕ್ಷದವರು ಯಾವುದೇ ಯೋಜನೆ ಇಲ್ಲದೆ ಹಣ ಮತ್ತು ಜಾತಿ ಬಲದ ಮೇಲೆ ಗೆಲ್ಲಲು ಮುಂದಾಗಿದ್ದಾರೆ. ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಬಿಜೆಪಿಗೆ ಬೈದ್ರೆ ನಾವು ದೇಶ ವಿರೋಧಿಗಳು, ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ನಾವು ಕೋಮುವಾದಿಗಳು ಎಂದು ಕಿಡಿಕಾರಿದರು.
ಕಾರ್ಕಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: ಆರೋಪಿ ಬಂಧನ – Vishwanews24
