ನಾವು ಯುದ್ಧದಿಂದ ಸ್ವಾತಂತ್ರ್ಯ ಪಡೆದಿಲ್ಲ, ಶಾಂತಿಯಿಂದ ಗೆದ್ದಿದ್ದು : ಕೆ. ಹೆಚ್ ಮುನಿಯಪ್ಪ – vishwanews24

Featured, ರಾಜ್ಯ ನ್ಯೂಸ್

ನಾವು ಯುದ್ಧದಿಂದ ಸ್ವಾತಂತ್ರ್ಯ ಪಡೆದಿಲ್ಲ, ಶಾಂತಿಯಿಂದ ಗೆದ್ದಿದ್ದು : ಕೆಹೆಚ್ ಮುನಿಯಪ್ಪ

ಕೋಲಾರ: ನಾವು ಯುದ್ಧದಿಂದ ಸ್ವಾತಂತ್ರ್ಯ ಪಡೆದಿಲ್ಲ, ಶಾಂತಿಯಿಂದ ಯುದ್ಧ ಗೆದ್ದಿದ್ದು, ಹೀಗಾಗಿ ನಾವು ಶಾಂತಿಯಿಂದಲೇ ಸಾಧನೆ ಮಾಡಬೇಕು ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ  ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ ಪಾಕ್  ಮತ್ತು ಭಾರತದ  ನಡುವೆ ಕದನ ವಿರಾಮ ಘೋಷಣೆ ಮಾಡಿರುವುದರಲ್ಲಿ ಅಮೆರಿಕಕ್ಕೆ ಮಹತ್ವ ಸ್ಥಾನವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ದೇಶದಲ್ಲಿ ಬ್ರಿಟಿಷರು 200 ವರ್ಷ ರಾಜ್ಯಭಾರ ಮಾಡಿದರು. ಆಗ ಅವರನ್ನು ನಾವು ಯುದ್ಧದಿಂದ ಗೆದ್ದಿಲ್ಲ, ಶಾಂತಿಯಿಂದ ಗೆದಿದ್ದು, ಗಾಂಧೀಜಿಯವರು ನಾವು ಶಾಂತಿಯಿಂದ ಸಾಧನೆ ಮಾಡಬೇಕೆಂದು ಹೇಳಿದ್ದಾರೆ. ಭಯೋತ್ಪಾದಕರು ವಿನಾಕಾರಣ ನಮ್ಮ ಜನರ ಮೇಲೆ ದಾಳಿ ಮಾಡಿದ್ದಕ್ಕೆ ಸಂಘರ್ಷ ಉಂಟಾಗುತ್ತಿದೆ. ನಾವು ಪಾಕಿಸ್ತಾನ ಮೇಲೆ ಯುದ್ಧ ಮಾಡಿಲ್ಲ, ನಾಗರಿಕರ ಮೇಲೆ ದಾಳಿ ಮಾಡಿಲ್ಲ, ಆದರೆ ಭಾರತೀಯ ಸೇನೆ ಭಯೋತ್ಪಾದಕರ ಮೇಲೆ ಪ್ರಹಾರ ಮಾಡಿದ್ದಾರೆ ಎಂದರು.

ಭಾವನಾತ್ಮಕ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ – vishwanews24

ವ್ಯಾಜ್ಯ ಆಗುವಾಗ ಹಿರಿಯರೊಬ್ಬರು ಬಂದು ಯುದ್ಧ ಬೇಡವೆಂದಾಗ ಅವರಿಗೆ ಗೌರವ ಕೊಡಬೇಕು, ಭಾರತದ ಪ್ರಧಾನಿಯವರು ಅಮೆರಿಕ ದೇಶಕ್ಕೆ ಗೌರವ ಕೊಟ್ಟಿದ್ದಾರೆ. ಭಾರತ ದೇಶ ನಾಗರಿಕರನ್ನು ಕಳೆದುಕೊಂಡಿದೆ, ಕಲಹದಿಂದ, ಯುದ್ಧದಿಂದ ಸಾಧನೆ ಮಾಡಲು ಸಾಧ್ಯವಿಲ್ಲ, ನಾವೆಲ್ಲರೂ ಮಾನವರು, ಮಾನವರಾಗಿ ಬಾಳೋಣ, ಅವರವರ ಧರ್ಮ ಅವರು ಪಾಲನೆ ಮಾಡಿಕೊಳ್ಳಲಿ ಎಂದು ತಿಳಿಸಿದರು.

Leave a Reply