ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರೆಸುತ್ತೇವೆ :ಶೋಭಾ ಕರಂದ್ಲಾಜೆ – vishwanews24

Featured, ಉಡುಪಿ

‘ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಹಿಟ್ಲರ್ ಆಗಿದ್ದಾರೆ’- ಶೋಭಾ ಕರಂದ್ಲಾಜೆ

ಬೆಂಗಳೂರು: ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ . ಬಿಜೆಪಿ ಶಾಸಕರಾದ ಹರೀಶ್ ಪೂಂಜ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಶಾಸಕ, ಸಂಸದರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಕಾಂಗ್ರೆಸ್​ ನಾಯಕ ಐವನ್ ಡಿಸೋಜಾ ನೀಡಿದ ಹೇಳಿಕೆ ಮೇಲೆ ಕ್ರಮ ಕೈಗೊಂಡಿಲ್ಲ ಎಂದರು.

ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕಾಂಗ್ರೆಸ್ ಶಾಸಕರ ಮೇಲೆ ಕ್ರಮ ಆಗಲಿಲ್ಲ. ಮಾಜಿ ಸಚಿವ ನಾಗೇಂದ್ರ ಹಗರಣದಲ್ಲಿ ಇದ್ದರು. ಆದರೆ ಎಸ್ಐಟಿ ಚಾರ್ಜ್​​ಶೀಟ್​​ನಲ್ಲಿ ಅವರ ಹೆಸರೇ ಇಲ್ಲ.ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಶೋಭಾ ಪ್ರಶ್ನಿಸಿದರು.

ಬಿಎಸ್‌ವೈ ವಿರುದ್ಧ ಪೋಕ್ಸೊ ಪ್ರಕರಣ : – ಸೆ.27ಕ್ಕೆ ವಿಚಾರಣೆ ಮುಂದೂಡಿಕೆ – vishwanews24

ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನ್​ನಲ್ಲಿ ಕರೆದುಕೊಂಡು ಹೋದರು. ಇದು ದೇಶದಲ್ಲೇ ಮೊದಲು. ಗಣಪತಿಗೇ ವಿಘ್ನ ಮಾಡಿದರು. ಚಪ್ಪಲಿ ಬಿಸಾಡಿದರು, ಕಲ್ಲು ಎಸೆದರು, 25 ಅಂಗಡಿ ಸುಟ್ಟು ಹಾಕಿದರು. ಅವರಿಗೆ ಎಲ್ಲಿಂದ ಶಕ್ತಿ ಬಂತು? ಕೇರಳದವರು ಬಂದಿದ್ದಾರೆ ಎಂದು ಗೊತ್ತಾಗಿದೆ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಎಫ್ಐಆರ್ ಹಾಕಿದೆ, ಅದನ್ನು ನಾವು ಎದುರಿಸುತ್ತೇವೆ. ಪೊಲೀಸರು ನಮ್ಮನ್ನು ಬಂಧಿಸಬಹುದು. ನಾವು ಹೋರಾಟ ಮಾಡಿಕೊಂಡು ಬಂದವರು, ಹೋರಾಟ ಮುಂದುವರೆಸುತ್ತೇವೆ. . ಇದನ್ನೆಲ್ಲಾ ಕಾನೂನು ಮೂಲಕವೇ ಎದುರಿಸುತ್ತೇವೆ ಎಂದು ಹೇಳಿದರು.

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಅವರು ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಾವು ತಪ್ಪು ಮಾಡಿದ ಯಾರನ್ನೂ ರಕ್ಷಣೆ ಮಾಡಲ್ಲ. ಆದರೆ ಸರಕಾರ ದ್ವೇಷದ ರಾಜಕೀಯ ಮಾಡುವುದು ಬೇಡ ಎಂದರು.

ಪಡುಬಿದ್ರಿ: ಅದಾನಿ ಸಿಎಸ್ಆರ್ ಅನುದಾನದಡಿ  ಸ್ಯಾನಿಟರ್ ಪ್ಯಾಡ್ ಇನ್ಸಿರಿನೇಟರ್ ಘಟಕ ಲೋಕಾರ್ಪಣೆ – vishwanews24

Leave a Reply