ಹೊಸದಿಲ್ಲಿ, : ಭಕ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇದೀಗ ಮತ್ತೊಂದು ವಿವಾದ ಎಬ್ಬಿಸಿದ್ದಾರೆ. ಮಂಗ, ಹಸು ಹಾಗೂ ಸಿಂಹಗಳನ್ನು ಕೂಡಾ ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡುವಂತೆ ಮಾಡಬಲ್ಲೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿರುವ ನಿತ್ಯಾನಂದ, ಪ್ರೇಕ್ಷಕರಿಗೆ ಈ ವಿಚಿತ್ರ ಭರವಸೆ ನೀಡಿದಾಗ, ಪ್ರೇಕ್ಷಕರು ಪ್ರಚಂಡ ಕರತಾಡನದೊಂದಿಗೆ ಸ್ವಾಗತಿಸಿದರು.
“ನಾನು ಪ್ರಾತ್ಯಕ್ಷಿಕೆ ಮಾಡುತ್ತೇನೆ.. ಮಂಗಗಳು ಮತ್ತು ನಾವು ಹೊಂದಿರುವ ಹಲವು ಅಂಗಗಳನ್ನು ಹೊಂದಿದರ ಇತರ ಕೆಲ ಪ್ರಾಣಿಗಳಲ್ಲಿ ಕೂಡಾ ಅತೀಂದ್ರಿಯ ಸಂಶೋಧನೆ ಮೂಲಕ, ಈ ಅಂಗಾಂಗಗಳು ಬೆಳೆಯುವಂತೆ ಮಾಡಬಹುದು. ಅದನ್ನು ಸಾಧಿಸಿ ತೋರಿಸುತ್ತೇನೆ, ವೈಜ್ಞಾನಿಕ, ವೈದ್ಯಕೀಯ ಪರೀಕ್ಷೆ ಮತ್ತು ಸಂಶೋಧನೆ ಮೂಲಕ ದೃಢಪಡಿಸುತ್ತೇನೆ” ಎಂದು ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ಆಕಸ್ಮಿಕವಾಗಿ ಪರೀಕ್ಷೆಗೆ ಒಳಪಡಿಸಿದ ಸಾಫ್ಟ್‌ವೇರ್‌ನ ನೆರವಿನಿಂದ ಈ ಸಂಶೋಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ. “ಈ ಸಾಫ್ಟ್‌ವೇರನ್ನು ನಿನ್ನೆ ಪರೀಕ್ಷೆಗೆ ಒಳಪಡಿಸಿದ ನಂತರ ನಾನಿದನ್ನು ಘೋಷಿಸುತ್ತಿದ್ದೇನೆ. ನಿನ್ನೆ ನಾನು ಆಕಸ್ಮಿಕವಾಗಿ ಇದನ್ನು ಪರಿಶೀಲಿಸಿದೆ. ಇದು ಪರಿಪೂರ್ಣವಾಗಿ ಕೆಲಸ ಮಾಡುತ್ತದೆ. ಬರೆದಿಟ್ಟುಕೊಳ್ಳಿ, ಒಂದು ವರ್ಷದೊಳಗೆ ನಾನಿದನ್ನು ನಿರೂಪಿಸಬಲ್ಲೆ” ಎಂದು ಹೇಳಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…