ನಿಮಗೆ ಧೈರ್ಯ ಇಲ್ಲದಿದ್ರೆ ನಮ್ಮನ್ನ ಕರೆದುಕೊಂಡು ಹೋಗಿ , ನಾವು ಪ್ರಧಾನಿ ಹತ್ತಿರ ಮಾತನಾಡುತ್ತೇವೆ : ಸಿಎಂ ಗೆ ಸಿದ್ದರಾಮಯ್ಯ -Vishwanews24
ಬೆಂಗಳೂರು: ನಿಮಗೆ ಧೈರ್ಯ ಇಲ್ಲದಿದ್ರೆ ನಮ್ಮನ್ನ ಕರೆದುಕೊಂಡು ಹೋಗಿ , ನಾವು ಪ್ರಧಾನಿ ಹತ್ತಿರ ಮಾತನಾಡುತ್ತೇವೆ ಎಂದು ಸಿಎಂ ವಿರುದ್ಧ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ನೆರೆ ಪರಿಹಾರದ ವಿಷಯದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೊದಲು ವಿಶೇಷ ಅಧಿವೇಶನ ಕರೆಯಿರಿ, ರಾಜ್ಯದ ಜನರು ಕಷ್ಟ, ಸಮಸ್ಯೆ ಚರ್ಚಿಸಬೇಕು, ನಿಮಗೆ ಶಕ್ತಿ, ಸಲಹೆ ಕೊಡುತ್ತೇವೆ. ನಮ್ಮ ಕಾಂಗ್ರೆಸ್ ಪಕ್ಷದವತಿಯಿಂದ ಈ ವಿಚಾರದಲ್ಲಿ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.
ಸದ್ಯ ಸರ್ಕಾರ ಸುಮ್ಮನಿದ್ದರೂ ನಾವು ಸುಮ್ಮನೆ ಕೂರಲ್ಲ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಇದು ಬೆದರಿಕೆ ಅಲ್ಲ, ಪ್ರತಿಪಕ್ಷವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ನೀಡಿದರು.
ಇದೇ ವೇಳೆಯಲ್ಲಿ ರಾಜ್ಯದ ೭ ಜಿಲ್ಲೆಗಳಲ್ಲಿ ಭೀಕರ ಬರಗಾಲವಿದೆ. ಕೂಡಲೇ ಬರಪರಿಹಾರ ಕಾರ್ಯಕ್ರಮ ತೆಗೆದುಕೊಳ್ಳಬೇಕು. ಪ್ರವಾಹ ಪ್ರದೇಶಗಳಲ್ಲಿ ಸಮಾರೋಪಾದಿಯಲ್ಲಿ ಕೆಲಸ ಆಗಬೇಕು, ಬಿದ್ದ ಶಾಲೆಗಳನ್ನ ಕೂಡಲೇ ಪ್ರಾರಂಭಿಸಬೇಕು. ಕನಿಷ್ಠ ಒಂದು ಲಕ್ಷ ಕೋಟಿ ಇದಕ್ಕೆ ಬೇಕಿದೆ. ಕೂಡಲೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
