ಉಡುಪಿ: ಪ್ರತಿವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿಯ ದಿನ ವಿಭಿನ್ನ ವೇಷ ಹಾಕಿ ನಿಧಿ ಸಂಗ್ರಹಿಸಿ, ಬಡ ಆರ್ಥಿಕ ನೆರವು ನೀಡಲಾಗುವುದು ಎಂದು ಕಲಾವಿದ ರವಿ ಕಟಪಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳಿಂದ ವಿಭಿ ವೇಷ ಹಾಕುತ್ತಾ ಜನರಿಂದ ದೇಣಿಗೆ ಸಂಗ್ರಹಿಸಿ ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ ಎಂದರು.
ಈ ಬಾರಿ ಸಂಗ್ರಹವಾದ ಹಣವನ್ನು ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂಡುಬಾರಳಿಯ ಮಂದರ್ತಿಯ ಕುಶಲ ಹಾಗೂ ಉಷಾ ದಂಪತಿ ಪುತ್ರ ಶ್ರೀತನ್ ಚಿಕಿತ್ಸೆಗೆ, ಬಿಳಿ ರಕ್ತಕಣ ಸಮಸ್ಯೆ ಇರುವ ಕಳ್ಳಿಗುಡ್ಡೆ ವಕ್ವಾಡಿಯ ರವೀಂದ್ರ ಯಶೋಧ ದಂಪತಿ ಪುತ್ರ ಪ್ರಥಮ್ಗೆ, ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿರುವ ಪಂಚಬೆಟ್ಟು ಹಿರಿಯಡಕ ಕೃಷ್ಣಮೂರ್ತಿ ಆಚಾರ್ಯ, ಕುಶಲ ದಂಪತಿ ಪುತ್ರ ಕಿರಣ್ ಸೇರಿದಂತೆ 5 ಮಕ್ಕಳ ಚಿಕಿತ್ಸೆಗೆ ನೀಡಲಾಗುವುದು ಎಂದರು.
ಮೊದಲ ವರ್ಷ ಸಂಗ್ರಹವಾದ ₹ 1.04 ಲಕ್ಷದಲ್ಲಿ ಎಳ್ಳಂಪಳ್ಳಿ ದಿಪಾನ್ ಗುಡ್ಡೆಯ ಮುಕಾಂಬಿಕಾ ಅವರ ಪುತ್ರಿ ಅನ್ವಿತಾಳ ಶಸ್ತ್ರಚಿಕಿತ್ಸೆಗೆ ನೀಡಲಾಯಿತು.
2ನೇ ವರ್ಷದ ₹3.20 ಲಕ್ಷವನ್ನು ನಾಲ್ಕು ಮಕ್ಕಳಿಗೆ,
3ನೇ ವರ್ಷದ ₹4.65 ಲಕ್ಷವನ್ನು ಮೂರು ಮಕ್ಕಳಿಗೆ,
4ನೇ ವರ್ಷ ಸಂಗ್ರಹವಾದ 5.12 ಲಕ್ಷವನ್ನು ಮೂವರು ಮಕ್ಕಳಿಗೆ ಹಾಗೂ
5ನೇ ವರ್ಷ ಸಂಗ್ರಹವಾದ ₹5.32 ಲಕ್ಷವನ್ನು ಹಾಗೂ ಮಿಲಾಪ್ ಸಂಸ್ಥೆ ನೀಡಿದ ₹16 ಲಕ್ಷವನ್ನು 7 ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ದೇಣಿಗೆಯನ್ನು ಸೆ.3ರಂದು ಸಂಜೆ 5ಕ್ಕೆ ಕಟಪಾಡಿ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ ಫಲಾನುಭವಿಗಳಿಗೆ ಕೊಡಲಾಗುವುದು. ಅಂದು ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ, ಎಸ್ಪಿ ನಿಶಾ ಜೇಮ್ಸ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಸ್ಪಂದಿಸಬೇಕು. ವಿಜಯಾ ಬ್ಯಾಂಕ್ ಖಾತೆ ಸಂಖ್ಯೆ 117201011001056, ಐಎಫ್ ಎಸ್ಸಿ ಕೋಡ್ ವಿಐಜೆಬಿ 0001172 ನೆರವು ನೀಡಬಹುದು ಎಂದರು.
ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸುಸಂಧರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಜನಾಕರ್ಷಣೀಯವಾಗಿ ವೇಷ ಧರಿಸಿಕೊಂಡು ಜಿಲ್ಲೆಯಾದ್ಯಂತ ಸಂಚರಿಸುತ್ತಾ ಅನಾರೋಗ್ಯ ಪೀಡಿತ ಮಕ್ಕಳಿಗೆ ಕಳೆದೈದು ವರುಷಗಳಿಂದ ಆಸರೆಯಾಗುತ್ತ ಬಂದಿರುವ ರವಿ ಕಟಪಾಡಿಯವರು ನಿಮ್ಮೆಲ್ಲರ ಮುಂದೆ ಮತ್ತೊಮ್ಮೆ ಸಹಾಯಾರ್ಥ ವಾಗಿ ವೇಷಧರಿಸಿಕೊಂಡು ಈ ಬಾರಿಯೂ ಬರಲಿದ್ದಾರೆ ತಮ್ಮೆಲ್ಲರ ಸಹಕಾರವಿರಲಿ…….
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…