ಬೆಂಗಳೂರು: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ದಾಖಲೆ ಪ್ರಕಾರ ದೇಶದಲ್ಲಿ ವರ್ಷಕ್ಕೆ ಸುಮಾರು 5 ಲಕ್ಷ ಅಪಘಾತಗಳು ನಡೆಯುತ್ತಿವೆ. ಈ ರೀತಿಯ ರಸ್ತೆ ಅಪಘಾತದಲ್ಲಿ ಒಂದೂವರೆ ಲಕ್ಷ ಜನ ಸಾವನ್ನಪ್ಪಿದ್ದಾರೆ. ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ.
ಇನ್ನೂ ಕೆಲವು ನಿಯಮಗಳು ಡಿಸೆಂಬರ್ 1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೀಗಾಗಿ, ವಾಹನ ದಾಖಲೆ ಇಲ್ಲದಿದ್ದರೆ ಸರಿಮಾಡಿಸಿ. ಡ್ರೈವಿಂಗ್ ಲೈಸೆನ್ಸ್ ಮತ್ತು ಇನ್ಷುರೆನ್ಸ್ ಇಲ್ಲವಾದರೆ ಆದಷ್ಟು ಬೇಗ ಮಾಡಿಸಿಕೊಳ್ಳುವುದು ಉತ್ತಮ. ಮುಂದಿನ ತಿಂಗಳ 1ರಿಂದ ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದರೆ ದುಪ್ಪಟ್ಟು ದಂಡ ತೆರಬೇಕಾಗುತ್ತದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಿದರೆ, ವಾಹನ ಚಾಲನೆ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮತ್ತು ಅಪಘಾತ ಮಾಡಿದರೆ ಅದಕ್ಕೆ ಆ ಮಕ್ಕಳ ಪೋಷಕರು ಅಥವಾ ಆ ವಾಹನದ ಮಾಲಿಕರೇ ಹೊಣೆಯಾಗುತ್ತಾರೆ. ಆ ವಾಹನದ ನೋಂದಣಿಯನ್ನು 1 ವರ್ಷದವರೆಗೆ ಅಮಾನತಿನಲ್ಲಿ ಇಡಲಾಗುತ್ತದೆ.
ಪದೇಪದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ಅನರ್ಹಗೊಳಿಸಲಾಗುತ್ತದೆ.
| ವಿವರ | ಹಳೆಯ ದಂಡ (ರೂ.) | ಹೊಸ ದಂಡ (ರೂ.) |
| ಲೈಸೆನ್ಸ್ ಇಲ್ಲದ ವಾಹನ ಚಾಲನೆ | 500 | 5,000 |
| ಲೈಸೆನ್ಸ್ ತಿರಸ್ಕೃತಗೊಂಡಿದ್ದರೂ ಚಾಲನೆ | 500 | 10,000 |
| ವೇಗದ ಚಾಲನೆ | 400 | 1,000 (ಲಘು ವಾಹನ) 2000 (ಮಧ್ಯಮ ಪ್ರಯಾಣಿಕರ ವಾಹನ) |
| ಮದ್ಯಸೇವಿಸಿ ಚಾಲನೆ | 2,000 | 10,000 |
| ಹೆಲ್ಮೆಟ್ ಧರಿಸದಿದ್ದರೆ | 100 | 1,000, 3 ತಿಂಗಳ ಲೈಸೆನ್ಸ್ ರದ್ದು |
| ಸೀಟ್ ಬೆಲ್ಟ್ ಹಾಕದಿರುವುದು | 100 | 1,000 |
| ನಿಗದಿಗಿಂತ ಹೆಚ್ಚು ಜನರನ್ನು ಕರೆದೊಯ್ಯುವುದು | – | 1,000 |
| ತುರ್ತುಸೇವೆ ವಾಹನಗಳಿಗೆ ದಾರಿ ಬಿಡದಿರುವುದು | – | 10,000 |
| ಇನ್ಷುರೆನ್ಸ್ ಇಲ್ಲದೆ ವಾಹನ ಚಾಲನೆ | 1,000 | 2,000 |
| ದ್ವಿಚಕ್ರ ವಾಹನದಲ್ಲಿ ಹೆಚ್ಚು ಜನರನ್ನು ಕರೆದೊಯ್ಯುವುದು | 100 | 2,000, 3 ತಿಂಗಳವರೆಗೆ ಲೈಸೆನ್ಸ್ ರದ್ದು |
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…