Featured

ನಿರೀಕ್ಷೆಯಿಲ್ಲದೆ ಜೀವನದಲ್ಲಿ ಏನಾದರೂ ಮಾಡಬೇಕು : ಅಣ್ಣಾಮಲೈ -Vishwanews24

ಬೆಂಗಳೂರು:  ಅಣ್ಣಾಮಲೈ, ರಾಜಕೀಯವೂ ಸೇರಿದಂತೆ ಯಾವುದಾದರೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುವುದಾಗಿ ಹೇಳಿದ್ದಾರೆ.

ಭಾರತೀಯ ಪೊಲೀಸ್ ಸೇವೆ ಬಗ್ಗೆ ಅತ್ಯಂತ ಗೌರವವಿದೆ. ನಮ್ಮ ರಾಷ್ಟ್ರಕ್ಕೆ ಪೊಲೀಸರು ನಿಜವಾದ ಫಿಲ್ಲರ್. ಆದರೆ, ಹೊಸ  ಸವಾಲು ಸ್ವೀಕರಿಸುವ ಅಗತ್ಯವಿದೆ ಅನ್ನಿಸಿತು. ಇದರ ಹೊರಗಡೆಯೂ ಏನಾದರೂ ಮಾಡಬಹುದು ಅನ್ನಿಸಿತು. ಎಲ್ಲಾ ವೇಳೆಯಲ್ಲೂ ಸರ್ಕಾರದಿಂದಲೂ ಮಾಡಬೇಕಾದ ಅಗತ್ಯವಿರುವುದಿಲ್ಲ ,ನನ್ನಗೆ ಸರಿ ಎನ್ನಿಸಿದನ್ನು ಮಾಡಲು ಬದ್ಧವಿರುವುದಾಗಿ ಸಂಡೇ ಎಕ್ಸ್ ಪ್ರೆಸ್ ಪ್ರತಿಕ್ರಿಯಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಕೆಲವರು  ದಕ್ಷ ಅಧಿಕಾರಿಗಳಿದ್ದಾರೆ. ಆದರೆ , ಅವರಿಗೆ ರಾಜಕೀಯ ಸರಪಳಿಯಿಂದ ಮುಕ್ತಿ ಸಿಗಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸಂಪರ್ಕ ಇರಬೇಕು ಆದರೆ, ಅದು ಹಸ್ತಕ್ಷೇಪವಾಗಬಾರದು.  ಐಪಿಎಸ್ ಅಥವಾ ಐಎಸ್ ಅಧಿಕಾರಿಗಳು ತಮ್ಮ ಸಾಮರ್ಥ್ಯವನ್ನು ದೇಶಕ್ಕಾಗಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು, ಉತ್ತಮ ರಾಜಕಾರಣಿಗಳು,  ಸಾರ್ವಜನಿಕರು ಪ್ರತಿಯೊಬ್ಬ ಪೊಲೀಸರಿಗೂ ಗೌರವ ನೀಡಬೇಕು ಎಂದರು

ಬಿಕೆ ಶಿವರಾಮ್ , ಅಬ್ದುಲ್ ಅಜೀತ್ ಮತ್ತಿತರ ಅಧಿಕಾರಿಗಳು ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಸೇರಿದರು. ಆದರೆ, ರಾಜಕೀಯ ಸಮುದ್ರದಲ್ಲಿ ಗುರಿ ಮುಟ್ಟುವಲ್ಲಿ ವಿಫಲರಾದರು. ಅದರಲ್ಲಿ ಅನೇಕ ಸಮಸ್ಯೆಗಳಿವೆ. ಸಾಧ್ಯತೆಗಳ ಬಗ್ಗೆಯೂ ನೋಡಿದ್ದೇನೆ. ನಿರೀಕ್ಷೆಯಿಲ್ಲದೆ ಜೀವನದಲ್ಲಿ ಏನಾದರೂ ಮಾಡಬೇಕು ಎಂಬುದರಲ್ಲಿ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ಫಲಿತಾಂಶ ಹೊರಬರಲಿದೆ. ಸದ್ಯಕ್ಕೆ ಪುಸ್ತಕ ಬರೆಯುತ್ತಿದ್ದೇನೆ. 2020ರ ಆರಂಭದ ತಿಂಗಳುಗಳಲ್ಲಿ ಇದು ಪ್ರಕಟವಾಗಲಿದೆ ಎಂದು ಅಣ್ಣಾಮಲೈ ತಿಳಿಸಿದರು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

21 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

21 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

23 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

23 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

1 day ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

1 day ago