ಕಾಪು: ಶಂಕರಪುರ ಸಾಯಿ ಸಾಂತ್ವನ ಮಂದಿರದ ವತಿಯಿಂದ ದಾನಿಗಳೊಬ್ಬರು ನೀಡಿದ ಕಂಬಳಿಯನ್ನ ರಾತ್ರಿ ಹೊತ್ತು ರಸ್ತೆ ಬದಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮಲಗುವ ನಿರ್ಗತಿಕರಿಗೆ ನೀಡುವ ಮೂಲಕ ಗುರೂಜಿ ಸಾಯಿ ಈಶ್ವರ್ ಮಾನವೀಯತೆ ಮೆರೆದಿದ್ದಾರೆ.
ಗುರುವಾರ ರಾತ್ರಿ ಮಂದಿರದ ಹಿತೈಶಿಗಳ ಜತೆಗೂಡಿ ಉಡುಪಿ ಬಸ್ ನಿಲ್ದಾಣಗಳಲ್ಲಿ ಗಾಳಿಮಳೆಗೆ ಮೈಯೊಡ್ಡಿ ಮಲಗಿರುವ ನಿರ್ಗತಿಕರಿಗೆ ಸುಮಾರು ೫೦ ರಷ್ಟು ಕಂಬಳಿಗಳನ್ನ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಸಾಯಿತುತ್ತು ಕಾರ್ಯಕ್ರಮದಡಿ ಬಿಕ್ಷೆ ಬೇಡುವ ನಿರ್ಗತಿಕರಿಗೆ,ಹಸಿವಿನಿಂದ ಬಳಲುತ್ತಿರುವವರಿಗ ಮಧ್ಯಾಹ್ನದ ಊಟ ನೀಡುವ ಯೋಜನೆ ಮತ್ತು ರಸ್ತೆ ಬದಿಯಲ್ಲಿ ಅಫಘಾತವಾಗಿ ಮರಣಹೊಂದುವ ಪ್ರಾಣಿ ಪಕ್ಷಿಗಳನ್ನ ಮಣ್ಣುಮಾಡುವ ಕಾರ್ಯದಲ್ಲಿಯೂ ಕೈಜೋಡಿಸಿರುವುದು ವಿಶೇಷ.
“ದೇವರ ಸೇವೆಯೆಂದರೆ ಕೇವಲ ಪೂಜೆಪುರಸ್ಕಾರ ಮಾತ್ರವಲ್ಲ. ಬಡವ, ನಿರ್ಗತಿಕರ, ಪ್ರಾಣಿ ಪಕ್ಷಿಗಳ ಸೇವೆ ಕೂಡ ದೇವರ ಸೇವೆಯೆಂದು ನಾನು ನಂಬಿದ್ದೆನೆ, ಮತ್ತು ಆಹಾರವಿಲ್ಲದೆ ಯಾರು ಕೂಡ ನಿದ್ರಿಸಬಾರದೆಂಬ ಕಾರಣದಿಂದ ಸಾಯಿತುತ್ತು ಕಾರ್ಯಕ್ರಮ ಅದರ ಜತೆಗೆ ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಮರಣವಿದೆ, ಮರಣನಂತರ ಅದರದ್ದೆ ಪ್ರಾಣಿಗಳು ರಸ್ತೆಬದಿಯಲ್ಲಿ ಕೊಳೆತುಹೋಗುವ ಬದಲು ಅದಕ್ಕೆ ವಿಧಿವಿಧಾನ ಕಾರ್ಯದೊಂದಿಗೆ ಅಂತ್ಯಕ್ರೀಯೆ ಮುಗಿಸಿದರೆ ಅದುಕ್ಕೂ ಒಂದು ಸಂತೃಪ್ತಿಯಿದೆ ಎಂಬ ನಂಬಿಕೆಯಿಂದ ಈ ಕಾರ್ಯಕ್ಕೆ ಇಳಿದಿದ್ದೆನೆ.ದಾನಿಯೊಬ್ಬರು ನೀಡಿರುವ ಕಂಬಳಿಯನ್ನ ಬಡವರಿಗೆ ಹಂಚಿದ್ದೇವೆ ಇದರಲ್ಲಿ ಸ್ವಾರ್ಥವಿಲ್ಲ ಎಲ್ಲವೂ ದೇವರ ಸೇವೆ”
ಗುರೂಜಿ ಸಾಯಿ ಈಶ್ವರ್
ವಿಶ್ವದ ನಂಬರ್ ೧ ಪೆಂಡ್ಯೂಲಮ್ ಶಾಸ್ತ್ರಜ್ಞ, ಸಾಯಿ ಸಾಂತ್ವನ ಮಂದಿರ ಶಂಕರಪುರ
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…
ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…
ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…
ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…
13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…