ನಿವಾರ್ ಚಂಡಮಾರುತ : ರಾಜ್ಯದ ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ : ಸಿಎಂ -Vishwanews24

Featured, ರಾಜ್ಯ ನ್ಯೂಸ್

ನಿವಾರ್ ಚಂಡಮಾರುತ : ರಾಜ್ಯದ ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ : ಸಿಎಂ -Vishwanews24

ಮೈಸೂರು: ತಮಿಳುನಾಡು ಕರಾವಳಿಗೆ ಇಂದು ಅಪ್ಪಳಿಸಲಿರುವ ನಿವಾರ್ ಚಂಡಮಾರುತ ಪರಿಣಾಮ ರಾಜ್ಯದ ಮೇಲೂ ಬೀರಲಿರುವ ಕಾರಣ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ನಾವು ನೀವು ಚಂಡಮಾರುತ ತಡೆಯಲು ಆಗುವುದಿಲ್ಲ. ಆದರೂ ಅಗತ್ಯ ಕ್ರಮ ಕೈಗೊಳ್ಳಲು‌ ಸೂಚಿಸಿದ್ದೇನೆ. ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದರು.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರವಾಗಿ ಮಾತನಾಡಿದ ಅವರು, ಇಂದು ಇನ್ನೂ 25-30 ನಿಗಮ ಮಂಡಳಿಗಳ ನೇಮಕ ಆದೇಶ ಬರಲಿದೆ. ಎಲ್ಲಾ ಪಟ್ಟಿ ಕೊಟ್ಟು ಬಂದಿದ್ದೇನೆ. ಸಂಜೆಯ ಒಳಗೆ ಆದೇಶ ಬರಲಿದೆ ಎಂದರು.

ಈ ಬಾರಿ ಯಾರಿಗೆಲ್ಲಾ ಅವಕಾಶ ಕೈ ತಪ್ಪಿದೆಯೊ ಅವರಿಗೆ ಮುಂದಿನ ಹಂತದಲ್ಲಿ ಪರಿಶೀಲಿಸುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.