ನೀವು ಬೆಂಬಲ ನೀಡುವುದಾದರೆ ಮದ್ಯಪಾನ ನಿಷೇಧದ ಪರ ಖಂಡಿತ ಧ್ವನಿ ಎತ್ತುತ್ತೇನೆ : ಸಿ.ಟಿ.ರವಿ -Vishwanews24

Featured, ರಾಜ್ಯ ನ್ಯೂಸ್

ಚಿತ್ರದುರ್ಗ: ಮದ್ಯ ನಿಷೇಧದ ಕುರಿತು ಸದನ ಹೊರಗೂ ಹಾಗೂ ಒಳಗೆ ಧ್ವನಿ ಎತ್ತುತ್ತೇನೆ. ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ತರಳುಬಾಳು ಗುರುಪೀಠದ ಬಯಲು ರಂಗ ಮಂದಿರದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ರವಿ ಮಾತನಾಡಿದರು.

ನೀವು ಬೆಂಬಲ ನೀಡುವುದಾದರೆ, ನಾನು ಸಹ ಸಂಪುಟದ ಒಳಗೆ ಹಾಗೂ ಹೊರಗೆ ಮದ್ಯಪಾನ ನಿಷೇಧದ ಪರ ಧ್ವನಿ ಎತ್ತುತ್ತೇನೆ. ಅಲ್ಲದೆ ಇಂದಿನ ಪರಿಸ್ಥಿತಿಯಲ್ಲಿ ಮದ್ಯಪಾನ ನಿಷೇಧ ಮಾಡಬೇಕಾದ ಅಗತ್ಯವಿದೆ  ಎಂದರು.

ಮತಕ್ಕಾಗಿ ರಾಜಕೀಯ ಮಾಡುವವರು ನಾವಲ್ಲ. ಸಿದ್ಧಾಂತದ ಹಿನ್ನೆಲೆ ನಾವು ರಾಜಕೀಯಕ್ಕೆ ಬಂದಿದ್ದೇವೆ. ಹೀಗಾಗಿ ಕೆಲವೊಮ್ಮೆ ನಿಷ್ಠುರವಾಗಿ ಮಾತನಾಡುತ್ತೇವೆ. ರಾಜಕಾರಣಕ್ಕಾಗಿ ಸಿದ್ಧಾಂತ ಹಿಡಿದಿಲ್ಲ, ಸಿದ್ಧಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಮದ್ಯ ನಿಷೇಧದ ಕುರಿತು ಖಂಡಿತ ಧ್ವನಿ ಎತ್ತುತ್ತೇವೆ ಎಂದು ಭರವಸೆ ನೀಡಿದರು.