ನೂರು ಕೋಟಿ ಕ್ಲಬ್ ಸೇರಿದ ಚಾಲೆಂಜಿಂಗ್ ಸ್ಟಾರ್ ಸುಯೋಧನನಾಗಿ ಅಭಿನಯಿಸಿರುವ ‘ಕುರುಕ್ಷೇತ್ರ’ -Vishwanews24
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಯೋಧನನಾಗಿ ಅಭಿನಯಿಸಿರುವ ‘ಕುರುಕ್ಷೇತ್ರ’ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ ಎಂದು ದರ್ಶನ್ ಅಭಿಮಾನಿಗಳ ಸಂಘ ಅನೌನ್ಸ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ದರ್ಶನ್ ಜತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ‘ಕುರುಕ್ಷೇತ್ರ’. ರಾಜ್ಯದಾದ್ಯಂತ 3ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿರುವ ಸಂಭ್ರಮಾಚರಣೆಯಲ್ಲಿ ಡಿ ಬಾಸ್ ಮತ್ತು ಅಭಿಮಾನಿಗಳು ಎಂದು ಡಿ ಕಂಪನಿ ಅಫಿಶಿಯಲ್ ಪೋಸ್ಟ್ ತಿಳಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ೫೦ನೇ ಚಿತ್ರ “ಕುರುಕ್ಷೇತ್ರ” ರಾಜ್ಯದಾದ್ಯಂತ ಮೆಗಾ ಬ್ಲಾಕ್ಬಸ್ಟರ್ 3ನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100ಕೋಟಿ ಗಳಿಕೆ ಕಂಡು ಮುನ್ನುಗ್ಗುತ್ತಿರುವ ಸಂಭ್ರಮಾಚರಣೆಯಲ್ಲಿ ಡಿ ಬಾಸ್ ಮತ್ತು ಅಭಿಮಾನಿಗಳು .#Kurukshetra #BiggestKannadaBlockbuster pic.twitter.com/pMeM8FdTvA
— D Company(R)Official (@Dcompany171) August 28, 2019
ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ರವಿಚಂದ್ರನ್, ಸೋನು ಸೂದ್, ಅಂಬರೀಷ್, ಸ್ನೇಹಾ ಮತ್ತು ಮೇಘನಾ ರಾಜ್ ತಾರಾಗಣದಲ್ಲಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್ ಕಾಣಿಸಲಿದ್ದಾರೆ. ಶಕುನಿ ಪಾತ್ರದಲ್ಲಿ ರವಿಶಂಕರ್, ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್ ಹಾಗೂ ಶಲ್ಯನ ಪಾತ್ರದಲ್ಲಿ ರಾಕ್ಲೈನ್ ವೆಂಕಟೇಶ್ ತೆರೆಯ ಮೇಲೆ ಅಬ್ಬರಿಸಿದ್ದಾರೆ.
