ನೇಹಾ ಹತ್ಯೆ ಪ್ರಕರಣ : ಇದು ಖಂಡಿತವಾಗಿಯೂ ಲವ್‌ ಜಿಹಾದ್‌ : ಅಮಿತ್ ಶಾ – Vishwanews24

Featured, ರಾಷ್ಟ್ರ ನ್ಯೂಸ್

ನೇಹಾ ಹತ್ಯೆ ಪ್ರಕರಣ : ಇದು ಖಂಡಿತವಾಗಿಯೂ ಲವ್‌ ಜಿಹಾದ್‌ : ಅಮಿತ್ ಶಾ

ನವದೆಹಲಿ :ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್‌ ಪ್ರಕರಣಕ್ಕೆ ನಾವು ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್‌ ಜಿಹಾದ್‌ ಪ್ರಕರಣವೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ನೇಹಾ ಹಿರೇಮಠ್‌ ಪ್ರಕರಣ ನಿಜವಾಗಿಯೂ ಲವ್‌ ಜಿಹಾದ್‌ ಪ್ರಕರಣ ಆಗಿದೆ. ನಾವು ಅದಕ್ಕೆ ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ. ನೇಹಾ ಹೀರೇಮಠ್‌ ಪ್ರಕರಣವನ್ನು ಸಿಎಂ, ಡಿಸಿಎಂ ವೈಯಕ್ತಿಕ ಕಾರಣಗಳಿಗೆ ನಡೆದಿದೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ. ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಂದೆಯ ಮೇಲೆ ಸಾವಿರ ಕೇಸ್‌ ಹಾಕಲಿ, ಏನು ಸಾಬೀತಾಗಬೇಕೋ ಅದು ಆಗಲಿದೆ : ಸೂರಜ್ ರೇವಣ್ಣ  – Vishwanews24

ಕಾಲೇಜು ಕ್ಯಾಂಪಸ್‌ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Leave a Reply