ನವದೆಹಲಿ: ಸಿಕ್ಕ ಸಿಕ್ಕ ಜಾಗಗಳಲ್ಲಿ ಜನರು ವಾಹನಗಳನ್ನು ಪಾರ್ಕಿಂಗ್ ಮಾಡುವ ಅಭ್ಯಾಸವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಕಾಣುತ್ತದೆ. ಆದರೂ ಜನರ ಈ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹೊಸ ಯೋಜನೆಯನ್ನು ರೂಪಿಸಿದೆ.
ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದ ಫೋಟೋಗಳನ್ನು ತೆಗೆದು, ಅದನ್ನು ಶೇರ್ ಮಾಡಿದ್ದಲ್ಲಿ, ಅವರಿಗೆ 500 ರೂ. ಬಹುಮಾನ ಕೊಡುವ ಹೊಸ ಕಾನೂನನ್ನು ತರುವ ಬಗ್ಗೆ ಯೋಜಿಸಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇಂಡಸ್ಟ್ರಿಯಲ್ ಡಿಕಾರ್ಬೋನೈಸೇಶನ್ ಸಮ್ಮಿಟ್ 2022 ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ ವ್ಯಕ್ತಿಗೆ 1,000 ರೂ. ದಂಡ ವಿಧಿಸುವುದರೊಂದಿಗೆ, ಆ ವಾಹನದ ಫೋಟೋವನ್ನು ಕ್ಲಿಕ್ಕಿಸಿದವರಿಗೆ 500 ರೂ. ಬಹುಮಾನ ಕೊಡುವುದಾಗಿ ಹೊಸ ಕಾನೂನನ್ನು ಶೀಘ್ರವೇ ತರುವ ಬಗ್ಗೆ ತಿಳಿಸಿದ್ದಾರೆ.
ಭಾರತದ ನಗರಗಳಲ್ಲಿ ಕಾರುಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪಾರ್ಕಿಂಗ್ ಸಮಸ್ಯೆಯೂ ಉಂಟಾಗುತ್ತಿದೆ. ಕೆಲವು ಕುಟುಂಬಗಳಲ್ಲಿ ಪ್ರತಿಯೊಬ್ಬರೂ ಕಾರುಗಳನ್ನು ಹೊಂದಿರುವವರೂ ಇದ್ದಾರೆ. ಆದರೆ ಯಾರೂ ಪಾರ್ಕಿಂಗ್‌ಗೆ ಜಾಗವನ್ನೇ ನಿರ್ಮಿಸುತ್ತಿಲ್ಲ. ಉದಾಹರಣೆ ಕೊಡುವುದಾದರೆ ದೆಹಲಿಯಲ್ಲಿ ಇರುವ ವಿಶಾಲವಾದ ರಸ್ತೆಗಳನ್ನೇ ಜನರು ಪಾರ್ಕಿಂಗ್ ಜಾಗವಾಗಿ ಪರಿಗಣಿಸುತ್ತಿದ್ದಾರೆ ಎಂದು ಗಡ್ಕರಿ ತಿಳಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…