ಉಡುಪಿ: ಯಶವಂತಪುರ ಜಂಕ್ಷನ್- ಮಡಗಾಂವ್ ಜಂಕ್ಷನ್ ನಡುವೆ ನ.13ರ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಪಡೆಯಲಿರುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ದಿನದ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಪ್ರಕಟಿಸಿದೆ.
ರೈಲು ನಂ.06512 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ವಂದೇಭಾರತ್ ಉದ್ಘಾಟನಾ ವಿಶೇಷ ರೈಲು ಅಪರಾಹ್ನ 1:30ಕ್ಕೆ ಸರ್ ಎಂ.ವಿಶ್ವೇಶ್ವರಯ ಟರ್ಮಿನಲ್ ನಿಲ್ದಾಣದಿಂದ ಹೊರಡಲಿದ್ದು, ಮುರುದಿನ ಮುಂಜಾನೆ 2:55ಕ್ಕೆ ಮಡಗಾಂವ್ ಜಂಕ್ಷನ್ ನಿಲ್ದಾಣ ತಲುಪಲಿದೆ.
ಇದನ್ನೂ ಓದಿ :
16 ಕಾರ್ ವಂದೇಭಾರತ್ ವಿಶೇಷ ಬೋಗಿಯನ್ನು ಹೊಂದಿರುವ ಈ ರೈಲಿಗೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ರೈಲು ನಂ.06213 ಮಂಗಳೂರು ಜಂಕ್ಷನ್- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚರಿಸುವ ವಂದೇಭಾರತ್ ಉದ್ಘಾಟನಾ ರೈಲು ನ.13ರ ಅಪರಾಹ್ನ 1:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಿ ಅದೇ ದಿನ ರಾತ್ರಿ 9:00ಗಂಟೆಗೆ ಬೆಂಗಳೂರು ತಲುಪಲಿದೆ.
ಈ ರೈಲು ಸಹ 16 ವಂದೇಭಾರತ್ ಕಾರ್ ರೇಕ್‌ನ್ನು ಹೊಂದಿದ್ದು, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮತ್ತು ಶ್ರವಣಬೆಳಗೊಳ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ನ.15ರಿಂದ ನಿಯಮಿತವಾಗಿ ಸಂಚರಿಸುವ ಈ ರೈಲಿನ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ :
ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್…
ಜ. 6ರಿಂದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್ ರೈಲಾಗಿ ಸಂಚಾರ ; ಟಿಕೆಟ್ ದರದಲ್ಲೂ ಕಡಿತ ಉಡುಪಿ: ಮುಂಬಯಿ ಲೋಕಮಾನ್ಯ ತಿಲಕ್…
ಬೆಳ್ತಂಗಡಿ : ಸರಣಿ ಅಪಘಾತ ; ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವು ಬೆಳ್ತಂಗಡಿ : ಗೂಡ್ಸ್ ಟೆಂಪೋ ಹಾಗೂ…
ಹೆಜಮಾಡಿ : ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರು ಬಂಧನ ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ತಾಲೂಕಿನ ಹೆಜಮಾಡಿ…
ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಿ.ಐ.ಡಿ ತನಿಖೆಗೆ ನೀಡಿರುವುದು ಸ್ವಾಗತಾರ್ಹ : ಗುರ್ಮೆ ಸುರೇಶ್ ಶೆಟ್ಟಿ ಕೆಲವು ದಿನಗಳ…
ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ : ಪರಮೇಶ್ವರ್ ಬೆಂಗಳೂರು: ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಡಿಸಿಎಂ…