ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ – vishwanews24

Featured, ಉಡುಪಿ

ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ

ಉಡುಪಿ: ಯಶವಂತಪುರ ಜಂಕ್ಷನ್- ಮಡಗಾಂವ್ ಜಂಕ್ಷನ್ ನಡುವೆ ನ.13ರ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಪಡೆಯಲಿರುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ದಿನದ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಪ್ರಕಟಿಸಿದೆ.

ರೈಲು ನಂ.06512 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ವಂದೇಭಾರತ್ ಉದ್ಘಾಟನಾ ವಿಶೇಷ ರೈಲು ಅಪರಾಹ್ನ 1:30ಕ್ಕೆ ಸರ್ ಎಂ.ವಿಶ್ವೇಶ್ವರಯ ಟರ್ಮಿನಲ್ ನಿಲ್ದಾಣದಿಂದ ಹೊರಡಲಿದ್ದು, ಮುರುದಿನ ಮುಂಜಾನೆ 2:55ಕ್ಕೆ ಮಡಗಾಂವ್ ಜಂಕ್ಷನ್ ನಿಲ್ದಾಣ ತಲುಪಲಿದೆ.

ಇದನ್ನೂ ಓದಿ :

ಜ. 6ರಿಂದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್‌ ರೈಲಾಗಿ ಸಂಚಾರ – vishwanews24

16 ಕಾರ್ ವಂದೇಭಾರತ್ ವಿಶೇಷ ಬೋಗಿಯನ್ನು ಹೊಂದಿರುವ ಈ ರೈಲಿಗೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರೈಲು ನಂ.06213 ಮಂಗಳೂರು ಜಂಕ್ಷನ್- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚರಿಸುವ ವಂದೇಭಾರತ್ ಉದ್ಘಾಟನಾ ರೈಲು ನ.13ರ ಅಪರಾಹ್ನ 1:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಿ ಅದೇ ದಿನ ರಾತ್ರಿ 9:00ಗಂಟೆಗೆ ಬೆಂಗಳೂರು ತಲುಪಲಿದೆ.

ಈ ರೈಲು ಸಹ 16 ವಂದೇಭಾರತ್ ಕಾರ್ ರೇಕ್‌ನ್ನು ಹೊಂದಿದ್ದು, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮತ್ತು ಶ್ರವಣಬೆಳಗೊಳ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ. ನ.15ರಿಂದ ನಿಯಮಿತವಾಗಿ ಸಂಚರಿಸುವ ಈ ರೈಲಿನ ವೇಳಾಪಟ್ಟಿಯನ್ನು ಮುಂದೆ ಪ್ರಕಟಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ :

ಹೆಜಮಾಡಿ :  ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರ ಬಂಧನ – vishwanews24

Leave a Reply